Breaking News

ಜ.16-17: ಪಲ್ಲೋಡಿ ದೈವಗಳ ಮೊಗ ಮೂರ್ತಿ ಭಂಡಾರಗಳ ಸ್ವೀಕಾರ

Advt_Headding_Middle
Advt_Headding_Middle

 

ಪಂಜದ ಪಲ್ಲೋಡಿ ಶ್ರೀ ಉಳ್ಳಾಕುಲು ಚಾಮುಂಡಿ ಹಾಗೂ ಪರಿವಾರ ದೈವಗಳ ಕೂಡುಕಟ್ಟಿನ ದೈವಸ್ಥಾನದಲ್ಲಿ ಮೊಗ ಮೂರ್ತಿ ಭಂಡಾರಗಳ ಸ್ವೀಕಾರ ಮತ್ತು ಗುಳಿಗ ದೈವದ ಪ್ರತಿಷ್ಠೆ ಹಾಗೂ ಶ್ರೀ ವಾಸುಕಿ ನಾಗರಾಜ ದೇವರ ಪ್ರತಿಷ್ಠೆ ಕಾರ್ಯಕ್ರಮ ಜ.16 ರಿಂದ ಜ.17 ರ.ತನಕ ಜರುಗಲಿದೆ.

ಸುಮಾರು 2೦೦ ವರುಷಗಳ ಹಿಂದೆ ಕಂಡೂರು ತರುವಾಡು ದೈವಸ್ಥಾನದಿಂದ ಪಲ್ಲೋಡಿ ದೈವಸ್ಥಾನಕ್ಕೆ ಭಂಡಾರ ಬಂದು ಉತ್ಸವ ನಡೆಯಿತಿತ್ತು. ಪಲ್ಲೋಡಿ ದೈವಸ್ಥಾನದಲ್ಲಿ ಉತ್ಸವ ನಡೆಯುತ್ತಿದ್ದರೂ ಕಂಡೂರಿನಿಂದ ಭಂಡಾರ ಬರುವುದು ಕಾಲ ಕ್ರಮೇಣ ನಿಂತು ಹೋಗಿತ್ತು.ಈ ಕುರಿತು ದೈವಜ್ಷರ ಚಿಂತನೆಗಳು ನಡೆದು.ಕಂಡೂರು ನಲ್ಲಿರುವ ಮೊಗ ಮೂರ್ತಿ ಭಂಡಾರಗಳು ಪಲ್ಲೋಡಿ ದೈವಸ್ಥಾದು,ಅದನ್ನು ಒಪ್ಪಿಸ ಬೇಕೆಂದು ಕಂಡು ಬಂದಿದೆ.ಹಿಂದೆ ವಾದ್ಯ ಘೋಷಣೆಗಳೊಂದಿಗೆ ರಾಜ ವೈಭವದಿಂದ ಮೆರವಣಿಗೆ ನಡೆಯುತ್ತಿತ್ತು.ಅದೇ ಪ್ರಕಾರ ಈ ಭಾರಿಯು ಮೊಗ ಮೂರ್ತಿ ಭಂಡಾರಗಳ ಮೆರವಣಿಗೆ ನಡೆದು ಮೂಲ ಸ್ಥಾನ ಪಲ್ಲೋಡಿಯಲ್ಲಿ ಸ್ವೀಕಾರ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.