ಜ. 25: ಬೆಳ್ಳಾರೆ ಸಹಕಾರಿ ಸಂಘದ ಚುನಾವಣೆ

Advt_Headding_Middle
Advt_Headding_Middle

ಜ. 13 ರಿಂದ ಚುನಾವಣಾ ಪ್ರಕ್ರಿಯೆ ಆರಂಭ

ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಚುನಾವಣೆಯು ಜ. 25 ರಂದು ನಡೆಯಲಿದ್ದು, ಚುನಾವಣಾ ಪ್ರಕ್ರಿಯೆಯು ಜ. 13 ರಿಂದ ನಡೆಯಲಿದೆ. ಜ. 13 ರಂದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಜ. 17 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಜ. 18ರಂದು ನಾಮಪತ್ರ ಪರಿಶೀಲನೆ ನಡೆದು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ. ಜ. 19 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು ಅಂದು ಚಿಹ್ನೆಯನ್ನು ನೀಡುವುದರೊಂದಿಗೆ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡು ಜ. 25ರಂದು ಬೆಳಿಗ್ಗೆ ಗಂಟೆ 9.00 ರಿಂದ ಸಂಜೆ ಗಂಟೆ 4.00 ರವರೆಗೆ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮತದಾನ ನಡೆಯಲಿದೆ. ಬಳಿಕ ಸಂಜೆ ಫಲಿತಾಂಶ ಘೋಷಣೆಯಾಗಲಿದೆ.

ಕಾಂಗ್ರೆಸ್, ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಪ್ರತ್ಯೇಕವಾಗಿ ಸ್ಪರ್ಧಿಸಲಿದ್ದಾರೆ ಮತ್ತು ಈ ಬಾರಿ ಹೊಸಬರು ಕೂಡಾ ಸ್ಪರ್ಥಿಸಲಿದ್ದಾರೆ ಎಂದು ಕೆಲವರು ಆಡಿಕೊಂಡರೆ ಈಗಾಗಲೇ ನಿರ್ದೇಶಕರಾಗಿರುವವರು ಸ್ಪರ್ಧಿಸಲಿದ್ದಾರೆ ಎಂದು ಕೆಲವರ ಅಭಿಪ್ರಾಯವಿದೆ. ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ಅಡ್ಡ ಮತದಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅಧ್ಯಕ್ಷರಾಗಿರುವ ಗಂಗಾಧರ ರೈ ಪುಡ್ಕಜೆಯವರಿಗೆ ಪಕ್ಷದ ವತಿಯಿಂದ ಸೀಟು ಕೊಡುವ ಬಗ್ಗೆ ಗ್ರಾಮಸ್ಥರು ಅನುಮಾನದ ಬಗ್ಗೆ ಮತಾನಾಡುತ್ತಿದ್ದಾರೆ.

ಇತ್ತೀಚೆಗೆ ಬೆಳ್ಳಾರೆಯಲ್ಲಿ ಎರಡು ಬಾರಿ ನಡೆದ ಪಕ್ಷದ ವರಿಷ್ಟರ ಸಭೆಯಲ್ಲಿ ಸುಳ್ಯ ಮಂಡಲದ ಪ್ರಮುಖರು ಭಾಗವಹಿಸಿದ್ದು ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ .ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಮುಂದಿನ ಬೆಳವಣಿಗೆಗಳು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡ ಬಳಿಕವಷ್ಟೆ ಅಂತಿಮ ಚಿತ್ರಣ ಸಿಗಲಿದೆ.

ಚುನಾವಣೆಗೆ ಒಟ್ಟು 12 ಸ್ಥಾನಗಳಿದ್ದು, ಅವುಗಳಲ್ಲಿ ಸಾಮಾನ್ಯ ಸ್ಥಾನಗಳು 5, ಮಹಿಳಾ ಮೀಸಲು ಸ್ಥಾನ 2, ಪರಿಶಿಷ್ಟ ಮೀಸಲು ಸ್ಥಾನ 1, ಪರಿಶಿಷ್ಟ ಪಂಗಡ ಮೀಸಲು ಸ್ಥಾನ 1,ಹಿಂದುಳಿದ ವರ್ಗ ಪ್ರವರ್ಗ ‘ ಎ ‘ಮೀಸಲು ಸ್ಥಾನ 2,ಸಾಲಗಾರರಲ್ಲದ ಕ್ಷೇತ್ರ ,1 ಕ್ಕೆ ಚುನಾವಣೆ ನಡೆಯಲಿದೆ.
ಕಡಬ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕೆ.ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.