ಜ. 18 : ಸಂಪಾಜೆಯಲ್ಲಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ನವರ ಸಂಸ್ಮರಣಾ ಕಾರ್ಯಕ್ರಮ ಮತ್ತು ಯಕ್ಷಗಾನ ಬಯಲಾಟ

Advt_Headding_Middle
Advt_Headding_Middle

ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ದ.ಕ ಇದರ ಆಶ್ರಯದಲ್ಲಿ ಡಾ. ಕೀಲಾರು ಗೋಪಾಕೃಷ್ಣನಯ್ಯನವರ ಸಂಸ್ಮರಣಾ ಕಾರ್ಯಕ್ರಮ ಹಾಗೂ ಯಕ್ಷಗಾನ ಬಯಲಾಟ ಜ.18 ರಂದು ಸಂಜೆ 4 ರಿಂದ ಕಲ್ಲುಗುಂಡಿ ವಠಾರದಲ್ಲಿ ನಡೆಯಲಿದೆ. ಸಂಜೆ ಸಭಾಕಾರ್ಯಕ್ರಮ ನಡೆಯಲಿದ್ದು, ಎಡನೀರು ಮಠದ ಕೇಶವಾನಂದ ಭಾರತೀ ಮಹಾಸ್ವಾಮಿಗಳವರು ಅಧ್ಯಕ್ಷತೆ ವಹಿಸಲಿದ್ದಾರೆ.

ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಗುರುದೇವಾನಂದ ಮಹಾಸ್ವಾಮಿಯವರು ಉಪಸ್ಥಿಯಲ್ಲಿ ಅಶೀರ್ವಚನ ನೀಡಲಿದ್ದಾರೆ. ಈ ಸಂದರ್ಭದಲ್ಲಿ ವೈದಿಕ ವಿದ್ವಾಂರಾದ ವೇ ಮೂ ಕೊಡಂಗೆ ವಿಶ್ವೇಶ್ವರ ಭಟ್‌ರಿಗೆ ಅಭಿನಂದನೆ, ಪ್ರಸಿದ್ಧ ಯಕ್ಷಗಾನ ಕಲಾವಿದರಾದ ದಿವಾಣ ಶಂಕರ ಭಟ್‌ರಿಗೆ ಸನ್ಮಾನ, ಬೆಂಗಳೂರಿನ ಹಿರಿಯ ನ್ಯಾಯವಾದಿಗಳು , ಕಲಾಪೋಷಕರಾದ ಎಂ.ಸುಧಾಕರ ಪೈಯವರಿಗೆ ಕಲಾಪೋಷಕ ಪ್ರಶಸ್ತಿ , ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಸನ್ಮಾನ ನಡೆಯಲಿದೆ. ಡಾ. ಕೀಲಾರು ಸಂಸ್ಮರಣಾ ಭಾಷಣವನ್ನು ಸಂಪಾಜೆ ಪ.ಪೂ. ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ವೈ.ಕೆ. ಮಾಲತಿ ಮಾಡಲಿದ್ದಾರೆ.

ವಿದ್ವಾಂಸರಾದ ವೇ.ಮೂ. ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣಾ ಮಾಡಲಿದ್ದಾರೆ. ಬಳಿಕ ಕುಶಲವ, ಬ್ರಹ್ಮಕಪಾಲ, ಪರೀಕ್ಷಾರಂಗ, ತಿಲೋತ್ತಮ ಮತ್ತು ಕರಂಡಕಾಸುರ ಕಾಳಗ ಯಕ್ಷಗಾನ ಬಯಲಾಟ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.