ಎಸ್‌ಎಸ್‌ಪಿಯು ಕಾಲೇಜಿನಲ್ಲಿ ನಿವೃತ್ತರಾದ ವಸಂತಿ ಬಿ.ಶೆಟ್ಟಿ ಅವರಿಗೆ ಬೀಳ್ಕೊಡುಗೆ ಸಮಾರಂಭ

Advt_Headding_Middle
Advt_Headding_Middle

ಬದುಕಿನಲ್ಲಿ ಪ್ರಗತಿ ಸಾಧಿಸಲು ಶ್ರಮ ಮುಖ್ಯ. ಕಷ್ಟ ಕಾಷ್ಟಕಾರ್ಪಣ್ಯತೆಯ ಬದುಕಿನ ಅನುಭವವು ಕಾರ್ಯತತ್ಪರತೆಯಿಂದ ಸೇವೆ ನೆರವೇರಿಸಲು ಅಡಿಗಲ್ಲಾಗುತ್ತದೆ.ಜೀವನದಲ್ಲಿ ನಾವು ಬರುವ ಹಾದಿಯಲ್ಲಿರುವ ಕಲ್ಲು-ಮುಳ್ಳುಗಳು ನಮಗೆ ನವ ಜೀವನದ ವಿನೂತನ ಪಠ್ಯವನ್ನು ಬೋಧಿಸುತ್ತದೆ. ಜೀವನ ಪಾಠವು ನಮಗೆ ಸಮಾಜದ ಹಿತವನ್ನು ಕಾಪಾಡಲು ಸ್ಪೂರ್ತಿಯನ್ನು ಒದಗಿಸುತ್ತದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಆಶೀರ್ವಾದದಿಂದ ಶ್ರೀ ದೇವಳದ ಆಧೀನತೆಯಲ್ಲಿನ ವಿದ್ಯಾಸಂಸ್ಥೆಯಲ್ಲಿ ಬದುಕಿನ ಪ್ರಧಾನ ಅಂಗವಾದ ಶಿಕ್ಷಣ ಜ್ಞಾನವನ್ನು ಸಂಪಾದಿಸುವ ಮಹಾಭಾಗ್ಯ ಈ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ದೊರಕಿದೆ.ಅದೇ ರೀತಿ ಇಲ್ಲಿ ಸೇವೆ ಮಾಡುವುದು ಕೂಡಾ ಪುಣ್ಯದ ಕೆಲಸ. ಇಲ್ಲಿ ನೆರವೇರಿಸಿದ ಕಾರ್ಯವು ಭಗವಂತನಿಗೆ ಅರ್ಪಿತವಾದುದು. ಸರ್ವರಿಗೂ ಅನುಕೂಲಕರವಾದ ರೀತಿಯಲ್ಲಿ ಕರ್ತವ್ಯ ನೆರವೇರಿಸುವುದು ಒಂದು ಕಲೆ.ಅದು ಸಾಕಾರಗೊಂಡಾಗ ಹೃದಯಪೂರ್ವಕವಾದ ಗೌರವಗಳು ಪ್ರಾಪ್ತವಾಗುತ್ತದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಹೇಳಿದರು.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತಕ್ಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಕಳೆದ ೨೯ ವರ್ಷಗಳಿಂದ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಸಂತಿ ಬಿ.ಶೆಟ್ಟಿ ಅವರಿಗೆ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಗುರುವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಅವರು ಮಾತನಾಡಿದರು.ಇಂತಹ ಸಮಾರಂಭಗಳು ಯುವ ವಿದ್ಯಾರ್ಥಿಗಳಲ್ಲಿ ಉತ್ತಮ ಕಾರ್ಯ ನೆರವೇರಿಸಿದರೆ ಗೌರವಗಳು ಪ್ರಾಪ್ತವಾಗುತ್ತವೆ ಎಂಬ ಜ್ಞಾನವನ್ನು ಬೋಧಿಸುತ್ತದೆ. ಶ್ರೀ ದೇವಳವು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾದ ಸಕಲ ಸವಲತ್ತುಗಳನ್ನು ನೀಡಿ ಅವರ ಭವಿಷ್ಯದ ಉಜ್ವಲತೆಗೆ ಪೂರಕ ವಾತಾವರಣ ನೀಡುತ್ತಿದೆ.ಈ ಕಾರಣದಿಂದ ಇಲ್ಲಿ ಕಲಿತ ಅಸಂಖ್ಯಾತ ವಿದ್ಯಾರ್ಥಿಗಳು ಶ್ರೇಷ್ಠವಾದ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.
ನಿಷ್ಠಾವಂತಿಕೆಯ ದುಡಿಮೆ ಪ್ರಧಾನ : ಸಾವಿತ್ರಿ.ಕೆ
ನಿಷ್ಠಾವಂತಿಕೆಯ ದುಡಿಮೆಯು ಸೇವೆಯಲ್ಲಿ ಪ್ರಧಾನವಾದ ಆಕರವಾಗಿದೆ. ನಿವೃತ್ತಿಯು ಸರಕಾರಿ ಸೇವೆಯ ಅವಿಭಾಜ್ಯ ಅಂಗ.ಉತ್ಕೃಷ್ಠ ಸೇವೆ ನೆರವೇರಿಸಿದ ವಸಂತಿ ಶೆಟ್ಟಿ ಅವರು ನಿಷ್ಠೆಗೆ ಹೆಸರಾದವರು.ವಿದ್ಯಾಸಂಸ್ಥೆಯ ಪ್ರಗತಿಯಲ್ಲಿ ಪ್ರಧಾನ ಕೇಂದ್ರವಾದ ಕಛೇರಿಯಲ್ಲಿ ಕರ್ತವ್ಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಸರ್ವರ ಪ್ರೀತಿಗೆ ಪಾತ್ರರಾದವರು.ತಾಳ್ಮೆ ಮತ್ತು ಸಹನೆಯ ಸೇವೆ ಮೂಲಕ ವಿದ್ಯಾಲಯದ ಪ್ರಗತಿಗೆ ದುಡಿದವರು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ ವಹಿಸಿದ್ದರು.ನಿವೃತ್ತ ದ್ವಿತೀಯ ದರ್ಜೆ ಸಹಾಯಕಿ ವಸಂತಿ.ಬಿ.ಶೆಟ್ಟಿ, ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ.ರಾಮ ಶರ್ಮ, ಎಸ್.ಎನ್.ಭಟ್ ಮುಖ್ಯಅತಿಥಿಗಳಾಗಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಗುರು ಕೆ.ಯಶವಂತ ರೈ, ಕಾಲೇಜಿನ ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್, ಕಛೇರಿ ಮುಖ್ಯಸ್ಥ ಉಮಾಪತಿ.ಎಸ್.ಆರ್ ವೇದಿಕೆಯಲ್ಲಿದ್ದರು. ವಸಂತಿ ಬಿ.ಶೆಟ್ಟಿ ಅವರ ಸುಪುತ್ರ ಹಿತೇಶ್ ಶೆಟ್ಟಿ, ಸೊಸೆಯಂದಿರಾದ ಮಮತಾ ಶೆಟ್ಟಿ, ರಚನಾ ಶೆಟ್ಟಿ, ಮೊಮ್ಮಗ ಗಮನ್ ಶೆಟ್ಟಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಗೌರವಿಸಿದರು.ವಿದ್ಯಾಸಂಸ್ಥೆಯಿಂದ ಪ್ರಾಂಶುಪಾಲೆ ಸಾವಿತ್ರಿ.ಕೆ ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಿದರು.ಶಿಕ್ಷಕ ರಕ್ಷಕ ಸಂಘದಿಂದ ಕಿಶೋರ್ ಕುಮಾರ್ ಕೂಜುಗೋಡು, ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ನಾಯಕ ಶ್ರೀವತ್ಸ ಗೌರವಿಸಿದರು. ಹಿರಿಯ ವಿದ್ಯಾರ್ಥಿ ಸಂಘದಿಂದ ಕಾರ್ಯದರ್ಶಿ ರತ್ನಾಕರ.ಎಸ್, ನಿರ್ದೇಶಕ ಪ್ರಕಾಶ್ ಸುಬ್ರಹ್ಮಣ್ಯ ಸನ್ಮಾನಿಸಿದರು. ಉಪನ್ಯಾಸಕ ವಿಶ್ವನಾಥ ನಡುತೋಟ ಮತ್ತು ಮುಖ್ಯಗುರು ಕೆ.ಯಶವಂತ ರೈ ಅಭಿನಂದನಾ ಮಾತುಗಳನ್ನಾಡಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆ.ಎಸ್.ಎಸ್ ಕಾಲೇಜಿನ ಉಪಪ್ರಾಂಶುಪಾಲೆ ಡಾ.ಉಷಾ.ಎಸ್.ಅಂಕೋಲೆಕರ್ ಶುಭ ಹಾರೈಸಿದರು.
ಕಾಲೇಜಿನ ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್ ಸ್ವಾಗತಿಸಿದರು. ಉಪನ್ಯಾಸಕ ಮನೋಜ್ ಕುಮಾರ್.ಬಿ.ಎಸ್ ಸನ್ಮಾನಪತ್ರ ವಾಚಿಸಿದರು.ಉಪನ್ಯಾಸಕ ಪ್ರವೀಣ್ ಎರ್ಮಾಯಿಲ್ ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕರು, ಶಿಕ್ಷಕರು, ಸಿಬ್ಬಂಧಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.