ಹೆತ್ತವರು ಅಧ್ಯಾಪಕರೊಡನೆ ನಿರಂತರ ಸಂಪರ್ಕದಿಂದ ವಿದ್ಯಾರ್ಥಿ ಗಳ ಭವಿಷ್ಯಕ್ಕೆ ಸಹಕಾರಿ : ಅಬ್ದುಲ್ಲಾ ಮಾಸ್ಟರ್

Advt_Headding_Middle
Advt_Headding_Middle

 

ಬೆಳ್ಳಾರೆ  ಝಕರಿಯಾ ಜುಮಾಮಸೀದಿ ಅಧೀನದಲ್ಲಿ ನಡೆಯುತ್ತಿರುವ ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಯ ಶಾಲಾ ವಾರ್ಷಿಕೋತ್ಸವ ವವು ಜ.11 ರಂದು ಶಾಲಾ ಸಂಚಾಲಕ ಬಶೀರ್ ಬಿ ಎ ಅಧ್ಯಕ್ಷ ತೆಯಲ್ಲಿ ನಡೆಯಿತು.

ಝಕರಿಯಾ ಜುಮಾಮಸೀದಿ ಬೆಳ್ಳಾರೆ ಉಪಾಧ್ಯಕ್ಷ ಯು ಹೆಚ್ ಅಬೂಬಕ್ಕರ್ ಕಾರ್ಯಕ್ರಮ ವನ್ನ ಉದ್ಘಾಟಿಸಿ ದರು.

ಪ್ರಸಕ್ತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗದೆ ವಿದ್ಯಾಭ್ಯಾಸ ದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ .ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳಬೇಕಾದಲ್ಲಿ ಹೆತ್ತವರು,ಪೋಷಕರು ಅಧ್ಯಾಪಕರೊಡನೆ ನಿರಂತರ ಸಂಪರ್ಕ ಹಾಗೂ ಸಂಸ್ಥೆ ಯೊಂದಿಗೆ ನಿರಂತರ ಸಂಪರ್ಕ ಅಗತ್ಯ ವಿದೆ ಯೆಂದು ಮುಖ್ಯ ಅತಿಥಿಯಾಗಿ ಆಗಮಿಸಿ ದ ಎನ್ ಎಂ ಪಿ ಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೇಸಿ ಅಬ್ದುಲ್ಲಾ ಮಾಸ್ಟರ್ ಅರಂತೋಡು ಕರೆನೀಡಿದರು.

ಶಾಲಾ ಮುಖ್ಯ ಶಿಕ್ಷಕಿ ಸುನೈನಾ ವಾರ್ಷಿಕ ವರದಿವಾಚಿಸಿದರು.ಬೆಳ್ಳಾರೆ ಝಕರಿಯಾ ಜುಮಾಮಸೀದಿ ಆಡಳಿತ ಸಮಿತಿ ಕಾರ್ಯ ದರ್ಶಿ ಬಶೀರ್ ಕಲ್ಲಪಣೆ ,ಕೋಶಾಧಿಕಾರಿ ಹಾಜಿ ಕೆ ಮಮ್ಮಾಲಿ , ಗ್ರಾ.ಪಂ ಬೆಳ್ಳಾರೆ ಸದಸ್ಯ ಆರೀಫ್ ಬೆಳ್ಳಾರೆ , ಬೆಳ್ಳಾರೆ ಝಕರಿಯಾ ಜುಮಾಮಸೀದಿ ಆಡಳಿತ ಸಮಿತಿ ಸದಸ್ಯ ಬಶೀರ್ ಯು ಪಿ , ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ರಹಿಮಾನ್ , ಖಲಂದರ್ ಶಾಫಿ ಬೆಳ್ಳಾರೆ , ಉಪಸ್ಥಿತರಿದ್ದರು.

ಜಮಾಅತ್ ಆಡಳಿತ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಸ್ವಾಗತಿಸಿ ,ಶಿಕ್ಷಕಿ ನಿವ್ಯಾ ವಂದಿಸಿದರು. ಶಿಕ್ಷಕಿ ಅಝ್ಮೀನ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.