ಬಳ್ಪ: ಆದಿ ಮೊಗೇರ್ಕಳ, ಕೊರಗಜ್ಜ ಮತ್ತು ಪರಿವಾರ ದೈವಗಳ ನೇಮೋತ್ಸವ

Advt_Headding_Middle
Advt_Headding_Middle

ಶ್ರೀ ನಾಗಬ್ರಹ್ಮ ಶ್ರೀ ಆದಿಮೊಗೇರ್ಕಳ ದೈವಗಳ ನೇಮೋತ್ಸವ ಸಮಿತಿ ನೀರಜರಿ ಬಳ್ಪ ಇದರ ಆಶ್ರಯದಲ್ಲಿ ೬ನೇ ವರ್ಷದ ದೈವಗಳ ನೇಮೋತ್ಸವವು ಜ. 11 ಮತ್ತು 12 ರಂದು ವಿಜೃಂಭಣೆಯಿಂದ ಜರಗಿತು.


ಜ. 11ರಂದು ಸಂಜೆ ಭಂಡಾರ ತೆಗೆದು ಗುಳಿಗ ಮತ್ತು ಪಾಷಾಣಮೂರ್ತಿ ದೈವಗಳ ನೇಮೋತ್ಸವ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆದ ಬಳಿಕ ಮೊಗೇರ್ಕಳ ಗರಡಿ ಇಳಿಯುವುದು, ತಡರಾತ್ರಿ ಕಿನ್ನಿ ಮಾಣಿಗ ಗರಡಿ ಇಳಿಯುವುದು ನೆರವೇರಿತು. ಜ. 12ರಂದು ಬೆಳಿಗ್ಗೆ ಧರ್ಮದೈವದ ನೇಮೋತ್ಸವ ನಡೆಯಿತು. ಬಳಿಕ ಉಪಹಾರ, ನಂತರ ಕೊರಗಜ್ಜ ದೈವದ ನೇಮೋತ್ಸವ, ಗಂಧ ಪ್ರಸಾದ ನಡೆಯಲಿರುವುದು.

ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿರುವುದು. ಸಮಿತಿಯ ಅಧ್ಯಕ್ಷರಾದ ಬಾಬು ಮುಗೇರ ನೀರಜರಿ, ಉಪಾಧ್ಯಕ್ಷರಾದ ಪೊಡಿಯ ಮುಗೇರ ನೀರಜರಿ, ಕಾರ್ಯದರ್ಶಿ ಪ್ರೇಮ ನೀರಜರಿ, ಜತೆ ಕಾರ್ಯದರ್ಶಿ ಸುಂದರಿ ಕಾಂಜಿ, ಕೋಶಾಧಿಕಾರಿ ಸುಂದರ ಎನ್. ನೀರಜರಿ ಸೇರಿದಂತೆ ನೇಮೋತ್ಸವ ಸಮಿತಿ ಅಧ್ಯಕ್ಷ ವಿನೋದ್ ಬೊಳ್ಮಲೆ, ಉಪಾಧ್ಯಕ್ಷ ನೀಲೇಶ್ವರ ಗೌಡ ನಾಳ, ಕಾರ್ಯದರ್ಶಿ ಮನೋಹರ ನ್. ನೀರಜರಿ ಮತ್ತು ಸಮಿತಿ ಸದಸ್ಯರು ಹಾಗೂ ಊರ ಪರವೂರ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ನೇಮೋತ್ಸವ ಯಶಸ್ವಿಯಾಗಿ ನೆರವೇರಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.