ಜ.14: ಕುಸುಮಸಾರಂಗ ನಾಟಕ ಹಬ್ಬ 2020

Advt_Headding_Middle
Advt_Headding_Middle

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಕುಸುಮಸಾರಂಗ ಆಯೋಜಿಸುವ ನಾಟಕ ಹಬ್ಬ ಜ.14 ರಂದು ನಡೆಯಲಿದೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷೀನಾರಾಯಂ ಕಜೆಗದ್ದೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕುಸುಮಸಾರಂಗದ ಪೂರ್ವ ಸಂಚಾಲಕ ತುಕಾರಾಮ ಗೌಡ ಯು ಮುಖ್ಯ ಅತಿಥಿಗಳಾಗಿ, ಪ್ರಾಂಶುಪಾಲ ಉದಯ ಕುಮಾರ್ ಕೆ., ರಂಗಕರ್ಮಿ ಜಯಪ್ರಕಾಶ್ ಮೊಂಟಡ್ಕ, ಪೂರ್ವ ವಿದ್ಯಾರ್ಥಿ ದುಗ್ಗಪ್ಪ ಗೌಡ ಕೆ., ರಾಮಚಂದ್ರ ಡಿ., ಉಮೇಶ್ ಶೆಟ್ಟಿ, ಕನ್ನಡ ಉಪನ್ಯಾಸಕ ಉದಯ ಕುಮಾರ್, ಐಕ್ಯೂಎಸಿ ಸಂಯೋಜಕ ಬಾಲಕೃಷ್ಣ ಪೈ, ವರ್ಷಾ ಎಂ.ಎಸ್. ಉಪಸ್ಥಿತರಿರಲಿದ್ದಾರೆ.

ಪೂವಾಹ್ನ ಗಂಟೆ 1೦ರಿಂದ 1೦.3೦ರವರೆಗೆ ಮುಖ್ಯಗುರು ಆಶಾ ಬೆಳ್ಳಾರೆ ನಿರ್ದೇಶನ, ರಂಗಪ್ಪ ಸಹಕಾರದಲ್ಲಿ ಗೊರವರ ಮೈಲಾರ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಸ್ತುತಿ, 1೦.45ರಿಂದ 11.15ರ ವರೆಗೆ ಕೃಷ್ಣಪ್ಪ ಬಿಂಬಿಲ ನಿರ್ದೇಶನದ ಕಲ್ಲುರ್ಟಿ ಕಲ್ಕುಡ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯ ಪ್ರಸ್ತುತಿ, ಗಂಟೆ 11.3೦ರಿಂದ 11.45 ರವರೆಗೆ ಹರ್ಷಿತ್ ಪಡ್ರೆ ನಿರ್ದೇಶನದ ಅಮ್ಮ ಹೇಳಿದ ಎಂಟು ಸುಳ್ಳುಗಳು ನಡುಗಲ್ಲು ಸ.ಹಿ.ಪ್ರಾ. ಶಾಲೆ ಪ್ರಸ್ತುತಿ, 12.3೦ರಿಂದ 1.3೦ರವರೆಗೆ ಶೇಖರ್ ಡಿ.ಶೆಟ್ಟಿಗಾರ್, ಪ್ರಸಾದ್ ಚೇರ್ಕಾಡಿ, ಆದಿತ್ಯ ನಿರ್ದೇಶನದ ಗುರುಪ್ರಸಾದ್ ಭಟ್ ತಂಡ ನಿರ್ವಹಣೆಯಲ್ಲಿ ಸಾಯುಜ್ಯ ಸಂಗ್ರಾಮ ಯಕ್ಷಗಾನ ನಡೆಯಲಿದೆ. ಹಿರಿಯರ ನಾಟಕದಲ್ಲಿ ಗಂಟೆ 2ರಿಂದ 3.15ರವರೆಗೆ ಎಸ್.ರಮಾನಾಥ ರಚನೆಯ, ಶಶಿಧರ ಭಾರಿಘಾಟ್ ನಿರ್ದೇಶನದ, ಸಂಗೀತಾ ಭೂಷನ್ ಭಟ್, ಬೆಳಕು ಸಗಾಯ್ ರಾಜು, ಮೈಸೂರು ಬಿ.ಎನ್.ಶಶಿಕಲಾ ಗಂಗಯಾಣ ಪ್ರಸ್ತುತಿಯ ಕಸ್ತೂರ ಬಾ(ಏಕವ್ಯಕ್ತಿ ಪ್ರದರ್ಶನ) ಪ್ರದರ್ಶನ ಕಾಣಲಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.