ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಏಕ ಗವಾಕ್ಷಿ ಸಮಿತಿ ರಚಿಸಲು ಜಯಪ್ರಸಾದ್ ಜೋಶಿ ಆಗ್ರಹ

Advt_Headding_Middle
Advt_Headding_Middle

ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಏಕ ಗವಾಕ್ಷಿ ಸಮಿತಿ ರಚಿಸಬೇಕೆಂದು ವಿದ್ಯುತ್ ಬಳಮೆದಾರರ ಕ್ರಿಯಾ ಸಮಿತಿ ಸಂಚಾಲಕ ಜಯಪ್ರಸಾದ್ ಜೋಶಿ ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.


ಸುಳ, ಕಡಬ ಮತ್ತು ಭಾಗಶಃ ಪುತ್ತೂರು ತಾಲೂಕುಗಳ ಬಗ್ಗೆ ವಿದ್ಯುತ್ ಇಲಾಖೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಈ ಪ್ರದೇಶದಲ್ಲಿ ಆಗಬೇಕಿದ್ದ ಹಲವು ಯೋಜನೆಗಳಿಗೆ ಚಾಲನೆ ಕೊಡದೆ ಮಂಜೂರಾದ ನಮ್ಮ ಪ್ರದೇಶದ ಎಲ್ಲಾ ಯೋಜನೆಗಳೂ ಸ್ಥಿತಿ-ಕಾರ್ಯಾರಂಭ ತಬ್ಬಲಿಗಳಾಗಿ ನೆನೆಗುದಿಗೆಯಲ್ಲಿದೆ. ರಜತ ಮಹೋತ್ಸವ ವರ್ಷವಾಗಿ ನೆನೆಗುದಿಯಲ್ಲಿರುವ ಸುಳ್ಯ 110 17 ವರ್ಷಗಳಿಂದ ಪುತ್ತೂರು ತಾಲೂಕು ಮಾಡಾವಿನಲ್ಲಿ 110 ಕೆ.ವಿ. ವಿದ್ಯುತ್ ಕೇಂದ್ರ ಬೆಳ್ಳಾರೆ, ಕಡಬ, ಸವಣೂರು, ಸುಬ್ರಹ್ಮಣ್ಯ, ಪುತ್ತೂರು ವಿತರಣಾ ಕೇಂದ್ರಗಳ ಅಭಿವೃದ್ಧಿ ಹಾಗೂ ಉನ್ನತೀಕರಣ, ಪಂಜ ಮತ್ತು ಅಲಂಕಾರು 110 ಕೆ.ವಿ. ದಶ ಮಹೋತ್ಸವ ಆಚರಿಸುತ್ತಿರುವ ಪ್ರಸ್ತಾವಿತ ಗುತ್ತಿಗಾರು 33 (ಭಾಗಶಃ ಕಾಮಗಾರಿಯಾಗಿದೆ), ಸಂಪಾಜೆ, ನಿಂತಿಕಲ್ಲು, ಕೈಕಾರ, ಕಾವು ಇತ್ಯಾದಿ ಸ್ಟೇಷನ್ ಗಳು ಸ್ಥಗಿತ ಸ್ಥಿತಿಯಲ್ಲಿದೆ. ಮುಂದಿನ ದಿನಗಳಲ್ಲಿ ವಿತರಣಾ ವ್ಯವಸ್ಥೆಯೇ ಕುಸಿದು ಬಿದ್ದು ಸರಬರಾಜು ಅಧೋಗತಿಗೆ ತಲುಪಿ ಮುಂದಿನ ದಿನಗಳಲ್ಲಿ ನಮ್ಮ ಪ್ರದೇಶ ಕಗ್ಗತ್ತಲಲ್ಲಿ ಮುಳುಗಬೇಕಾದಿತು.
ಸಮಸ್ಯೆ ಪರಿಹಾರಕ್ಕೆ ಹಾಗೂ ಎಲ್ಲಾ ಯೋಜನೆಗಳೂ ಕಾಲ ಮಿತಿಯಲ್ಲಿ ಪೂರೈಸಲು ಮತ್ತು ಪ್ರದೇಶದ ಸಮಗ್ರ ವಿದ್ಯುತ್ ಅಭಿವೃದ್ಧಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು, ಬಳಕೆದಾರರ ಪ್ರತಿನಿಧಿಗಳು ಇತ್ಯಾದಿ ಒಳಗೊಂಡ ಅಧಿಕಾರಯುಕ್ತ ಒಂದು ಏಕ ಗವಾಕ್ಷಿ ಸಮಿತಿ ರಚಿಸಬೇಕು. ನಿಯಮಿತವಾಗಿ ಸಭೆ ಸೇರುವ ಈ ಸಮಿತಿ ಎಲ್ಲಿ ಲೋಪವಾಗಿದೆಯೋ ಅಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರವನ್ನು ಹೊಂದಿರಬೇಕು. ಯಾವ ಇಲಾಖೆ ಯಾ ಅಧಿಕಾರಿಯೂ ಹೊಣೆಗಾರಿಕೆಯಿಂದ ನುಣುಚಲು ಅವಕಾಶವಿಲ್ಲದಂತಹ ವ್ಯವಸ್ಥೆ ಇದರಿಂದ ಉಂಟಾಗಬೇಕು. ಇದರ ರೂಪು ರೇಷೆಗಳನ್ನು ಜನಪ್ರತಿನಿಧಿಗಳಿಗೆ ಆಸಕ್ತಿಯಿದ್ದಲ್ಲಿ ಪರಿಣಾಮಕಾರಿಯಾಗಿ ರೂಪಿತಗೊಳಿಸಬಹುದಾಗಿದೆ ಎಂದು ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಸಂಚಾಲಕ ಜಯಪ್ರಸಾದ್ ಜೋಶಿಯವರು ಬಳಕೆದಾರರ ಪರವಾಗಿ ಸಂಸದ ಸನ್ಮಾನ್ಯ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕ ಎಸ್. ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರುರವರಿಗೆ ಜಂಟಿ ಮನವಿಯಲ್ಲಿ ಆಗ್ರಹಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.