Breaking News

ಶ್ರೀ ಗುರುರಾಘವೇಂದ್ರ ಮಠದಲ್ಲಿ ಭಜನಾ ಸ್ಪರ್ಧೆ 2020- ಧಾರ್ಮಿಕ ಸಭೆ

Advt_Headding_Middle
Advt_Headding_Middle

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಳಕದ ಶುಭ ಸಂದರ್ಭದಲ್ಲಿ ಶ್ರೀ ಗುರುರಾಘವೇಂದ್ರ ಮಠದಲ್ಲಿ ಜ.12 ರಂದು ಭಜನಾ ಸ್ಪರ್ಧೆ ನಡೆಯಿತು.
ಭಜನಾ ಸ್ಪರ್ಧೆ ಯನ್ನು ತಂಡದ ಸದಸ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.

 

ಭಜನೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ರವರು ಅಧ್ಯಕ್ಷತೆ ವಹಿಸಿದ್ದರು. ಮಧ್ವಾಧೀಶ ವಿಠಲದಾಸ ಹರಿದಾಸ ರಾಮಕೃಷ್ಣ ಕಾಟುಕುಕ್ಕೆಯವರಿಗೆ ಮಠದ ಪರವಾಗಿ ಗುರುವಂದನೆ ಸಲ್ಲಿಸಲಾಯಿತು. ದೀಪಾಂಜಲಿ ಮಹಿಳಾ ಮಂಡಳಿ ಶಾಂತಿನಗರ ಮತ್ತು ತೊಡಿಕಾನ ಶ್ರೀ ಶಿವ ಶಂಕರಿ ಭಜನಾ ಮಂಡಳಿ ಸದಸ್ಯರು ಗುರು ನಮನ ಅರ್ಪಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕ ಎಸ್. ಅಂಗಾರ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಾಜ್, ಶ್ರೀ ಗುರುರಾಘವೇಂದ್ರ ಮಠದ ಅಧ್ಯಕ್ಷ ಶ್ರೀ ಕೃಷ್ಣ ಸೋಮಾಯಾಗಿ, ಭಜನೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ್ ನಾಯರ್, ಸಂಚಾಲಕ ಪ್ರಕಾಶ್ ಮೂಡಿತ್ತಾಯ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಯಸ್ವಿನಿ ಗೀತೆಯನ್ನು ಆದಿತ್ಯ ರಮಣ್ ಹಾಡಿದರು. ಪ್ರಕಾಶ್ ಮೂಡಿತ್ತಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಭಾಕರ್ ನಾಯರ್ ಸ್ವಾಗತಿಸಿದರು. ಭ.ಸಮಿತಿ ಸದಸ್ಯೆ ಶ್ರೀಮತಿ ಹರ್ಷ ಕರುಣಾಕರ ವಂದಿಸಿದರು. ಸುದ್ದಿ ಪತ್ರಿಕೆ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು .

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.