HomePage_Banner
HomePage_Banner

110 ವಿದ್ಯುತ ಸಬ್ ಸ್ಟೇಶನ್ : ಜ.25ರಂದು ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಸಭೆ

ಸುಳ್ಯ ದ 110 ಕೆ.ವಿ. ವಿದ್ಯುತ್ ಸಬ್ ಸ್ಟೇಶನ್ ಕಾಮಗಾರಿಗೆ ಲೈನ್ ಹಾದುಬರುವ ಜಾಗದ ಸಮಸ್ಯೆ ಕುರಿತು ಪರಿಹಾರಕ್ಕೆ ಜ.25ರಂದು ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು, ಅಲ್ಲಿಯೂ ಪರಿಹಾರ ಸಿಗದಿದ್ದರೆ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಎಸ್.ಅಂಗಾರ ಹೇಳಿದರು.

ಜ.13ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದರು.

ಪಾಲನಾ ವರದಿಯಯಲ್ಲಿ 110 ಕೆ.ವಿ. ಸಬ್ ಸ್ಟೇಶನ್ ಕುರಿತು ವಿಚಾರ ಪ್ರಸ್ತಾಪವಾದಾಗ ಲೈನ್ ಹಾದು ಬರುವ ಜಾಗದ ಜಂಟೀ ಸರ್ವೆ ನಡೆಯಿತಾದರೂ ಡೀಮ್ಡ್ ಫಾರೆಸ್ಟ್‌ ನ ಸಮಸ್ಯೆ ಎದುರಾಗಿದೆ ಎಂದು ಕೆಪಿಟಿಸಿಎಲ್ ಅಧಿಕಾರಿ ಗಂಗಾಧರ್ ಹೇಳಿದಾಗ, ಈ ಉತ್ತರಗಳನ್ನು ಕೇಳಿ ಸಾಕಾಗಿದೆ. ಎಷ್ಟು ಸಮಯದಲ್ಲಿ ಆಗುತ್ತದೆ ಎಂದು ಹೇಳಿ ಎಂದು ತಾ.ಪಂ. ಸದಸ್ಯ ರಾಧಾಕೃಷ್ಣ ಬೊಳ್ಳುರು ಅಧಿಕಾರಿಯಲ್ಲಿ ಕೇಳಿದರು. ಈ ಕುರಿತು ಚರ್ಚೆಗಳಾದಾಗ ಅಧ್ಯಕ್ಷ ತೆ ವಹಿಸಿದ ಶಾಸಕರು ಮಾತನಾಡಿ ಕೆಲವು ಕಡೆ ಅಡಿಕೆ ತೋಟ, ಸಾಮಾಜಿಕ ಅರಣ್ಯ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಿ ರುವುದರಿಂದ ಈ ಸಮಸ್ಯೆ ಆಗಿದೆ. ಇದರ ಪರಿಹಾರಕ್ಕೆ ಈಗಾಗಲೇ ಉಸ್ತುವಾರಿ ಸಚಿವರಲ್ಲಿ ಮಾತನಾಡಿದ್ದೇನೆ. ಜ.25ರಂದು ಸಭೆ ನಡೆಸುವ ಕುರಿತು ಹೇಳಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದರು.

ಮೆಸ್ಕಾಂ ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಹಕರು ಸಭೆಯಲ್ಲಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.