Breaking News

ಮರ್ಕಂಜ ಶಾಸ್ತಾವು ಯುವಕ ಮಂಡಲ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

Advt_Headding_Middle
Advt_Headding_Middle


ಮರ್ಕಂಜ ಶ್ರೀ ಶಾಸ್ತಾವು ಯುವಕ ಮಂಡಲ ವತಿಯಿಂದ ಉಚಿತ ವೈದ್ಯಕೀಯ ಶಿಬಿರವು ಜ. 12 ರಂದು ರೆಂಜಾಳ ದೇವಸ್ಥಾನದ ಶ್ರೀ ವಿನಾಯಕ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಮೋನಪ್ಪ ಪೂಜಾರಿ ಹೈದಂಗೂರು ವಹಿಸಿದ್ದರು. ಉದ್ಘಾಟನೆಯನ್ನು ಶ್ರೀ ಕ್ಷೇತ್ರ ರೆಂಜಾಳದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹರ್ಬಟ್ ಮೆರಿಯೋ ಪಿರೇರ, ಗುತ್ತಿಗಾರು ವಲಯದ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ, ರೆಂಜಾಳ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಬಾಣೂರು, ರತನ್‌ರಾಜ್ ರೈ ರೆಂಜಾಳ, ಶ್ರೀಮತಿ ಕೋಮಲಾಂಗಿ, ಆನಂದ ಗೌಡ ಬಾಣೂರು, ಚರಣ್‌ರಾಜ್ ಕಾಯರ, ಕುಮಾರಸ್ವಾಮಿ ರೆಂಜಾಳ ಉಪಸ್ಥಿತರಿದ್ದರು.
ಶಶಿಕಾಂತ ಗುಳಿಗಮೂಲೆ ಸ್ವಾಗತಿಸಿ, ಶಿವರಂಜನ್ ರಾವ್ ದಾಸರಬೈಲು ಧನ್ಯವಾದಗೈದರು, ಐತ್ತ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಸಾರ್ವಜನಿಕರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.