HomePage_Banner
HomePage_Banner

ಕಳಂಜ: ವಿದ್ಯಾನಿಕೇತನ ಶಿಶುಮಂದಿರದಲ್ಲಿ ಚಿಣ್ಣರ ಹಬ್ಬ


ಕಳಂಜದ ವಿದ್ಯಾನಿಕೇತನ ಶಿಶು ಮಂದಿರದಲ್ಲಿ ಚಿಣ್ಣರ ಹಬ್ಬ ಜ. 13 ರಂದು ನಡೆಯಿತು. ಸಂಜೆ ವೇದಮೂರ್ತಿ ಶಾಂತಕುಮಾರ ಭಟ್ಟರ ನೇತೃತ್ವದಲ್ಲಿ ಸಾಮೂಹಿಕ ದುರ್ಗಾಪೂಜೆ ಮತ್ತು ಚಂಡಿಕಾ ಹೋಮ ನಡೆಯಿತು. ಶಿಶುಮಂದಿರದ ಪುಟಾಣಿಗಳಿಂದ ಚಿಣ್ಣರ ಪ್ರತಿಭಾದರ್ಶನ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾರತೀ ಸೇವಾ ಸಮಿತಿಯ ಅಧ್ಯಕ್ಷ ಅಶೋಕ ಕೆದಿಲ ವಹಿಸಿ, ಸ್ವಾಗತಿಸಿದರು. ಶಿವರಾಮಯ್ಯ ಕರ್ಮಜೆ ಅತಿಥಿಯಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾನಿಕೇತನ ಶಿಶುಮಂದಿರದ ವ್ಯವಸ್ಥಾಪಿಕಾ ಶ್ರೀಮತಿ ಮಾಲಿನಿ ಪ್ರಸಾದ್ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ದಿನೇಶ್ಚಂದ್ರ ಪಿ. ವಂದಿಸಿದರು. ಅಜಿತ್ ರಾವ್ ಕಿಲಂಗೋಡಿ ಮತ್ತು ಶ್ರೀಮತಿ ಅನುಷಾ ಕಾರ್ಯಕ್ರಮ ನಿರೂಪಿಸಿದರು. ಚಿಣ್ಣರ ಹಬ್ಬದ ಪ್ರಯುಕ್ತ ನಡೆಸಿದ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಿಗೆ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಬಾಲಗೋಕುಲದ ಮಕ್ಕಳು ಮತ್ತು ಮಾತೃಮಂಡಳಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇದರ ಮಕ್ಕಳ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಭೋಜನ ನಡೆಯಲಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.