HomePage_Banner
HomePage_Banner

ಕಾವಿನಮೂಲೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಮೃತ್ಯು

 

ಬೆಳ್ಳಾರೆ ಸಮೀಪದ ಕಾವಿನಮೂಲೆಯಲ್ಲಿ ವ್ಯಾನ್ ಮತ್ತು ಸ್ಕೂಟಿ ಢಿಕ್ಕಿ ಹೊಡೆದುಕೊಂಡು ಗಂಭೀರ ಗಾಯಗೊಂಡಿದ್ದ ಸ್ಕೂಟಿ ಸವಾರ ಕೊಲ್ಲಮೊಗ್ರ ಚಾಂತಳದ ಚಿದಾನಂದರವರು (40 ) ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸಾಯಿ ಗುರು ವ್ಯಾನ್ ಹಾಗೂ ಸೋಣಂಗೇರಿ ಕಡೆಯಿಂದ ಬೆಳ್ಳಾರೆಗೆ ಹೋಗುತ್ತಿದ್ದ ಕೊಲ್ಲಮೊಗ್ರದ ಚಿದಾನಂದ ಎಂಬವರು ಚಲಾಯಿಸುತ್ತಿದ್ದ ಸ್ಕೂಟಿ ಕಾವಿನಮೂಲೆಯಲ್ಲಿ ಢಿಕ್ಕಿ ಹೊಡೆದುಕೊಂಡ ಪರಿಣಾಮ ಸ್ಕೂಟಿ ಸವಾರನಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಮಾಣಿ ತಲುಪುವಾಗ ಮೃತಪಟ್ಟರೆಂದು ತಿಳಿದುಬಂದಿದೆ.


ಕನಕಮಜಲಿನಲ್ಲಿ ತನ್ನ ಸಂಬಂಧಿಕರ ಮನೆಯ ಗೃಹಪ್ರವೇಶದ ಕುಟ್ಟಿಪೂಜೆಗೆ ನಿನ್ನೆ ಹೋದವರು ಇವತ್ತು ವಾಪಾಸು ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಸ್ಕೂಟಿಯ ಹಿಂಬದಿಯಲ್ಲಿ ಸಹಸವಾರರಾಗಿದ್ದ ತನ್ನ ಸಂಬಂದಿಯಾದ ಬೆಳ್ಳಾರೆಯಲ್ಲಿ ಏರ್ ಟೆಲ್ ಕಂಪೆನಿ ವಿತರಕ ವಿನೀತ್ ರವರು ಇದ್ದು ಅವರಿಗೆ ಸ್ವಲ್ಪ ಗಾಯವಾಗಿರುವುದಾಗಿ ತಿಳಿದು ಬಂದಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.