HomePage_Banner
HomePage_Banner
HomePage_Banner
HomePage_Banner

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವ ಸ್ಥಾನದ ಜಾತ್ರೋತ್ಸವದ ಆಮಂತ್ರಣ ಮತ್ತು ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಗೆ ಬಿಡುಗಡೆ

ಇತಿಹಾಸ ಪ್ರಸಿದ್ದ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆ “ಪಂಚಾಮೃತ ” ಇದರ ಬಿಡುಗಡೆ ಮತ್ತು ಜಾತ್ರೋತ್ಸವವು ಫೆ.8,9,10 ರಂದು ನಡೆಯಲಿದ್ದು ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜ.14 ರಂದು ದೇವಸ್ಥಾನದಲ್ಲಿ ನಡೆಯಿತು.


ಅರ್ಚಕ ಪದ್ಮನಾಭ ಭಟ್ ಪೂಜಾ ಕಾರ್ಯ ನೆರವೇರಿಸಿದರು.
ಸ್ಮರಣ ಸಂಚಿಕೆಯನ್ನು ಹಿರಿಯರಾದ ಶ್ರೀಧರ ಗೌಡ ಕೊಪ್ಪತ್ತಡ್ಕ ಮತ್ತು ಜಾತ್ರೋತ್ಸವದ ಆಮಂತ್ರಣವನ್ನು ಹಿರಿಯರಾದ ಸುಬ್ಬಪ್ಪ ಗೌಡ ಚೆಮ್ನೂರು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಮಾಧವ ಭಟ್ ಶೃಂಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವ್ಯವಸ್ಥಪನಾ ಸಮಿತಿ ಮಾಜಿ ಅಧ್ಯಕ್ಷ ಶಿವಪ್ಪ ಗೌಡ ನೆಕ್ಕರೆಕಜೆರವರು ಜಾತ್ರೋತ್ಸವವು ಯಶಸ್ವಿಯಾಗಿ ನಡೆಯಲು ಪೂರ್ವ ತಯಾರಿ ಬಗ್ಗೆ ಮಾತನಾಡಿ ಎಲ್ಲರ ಸಹಕಾರ ಕೋರಿದರು.


ವ್ಯ.ಸ.ಮಾಜಿ ಸದಸ್ಯ ಶಿವರಾಮ ನೆಕ್ರೆಪ್ಪಾಡಿಯವರು ಆಡಳಿತ ಮಂಡಳಿಯ 3 ವರ್ಷದ ಅವಧಿಯಲ್ಲಿ ದೇವಸ್ಥಾನದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು.ಮತ್ತು ಮುಂದೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥ, ದೇವಸ್ಥಾನದ ಆಡಳಿತಾಧಿಕಾರಿ ಐವರ್ನಾಡು ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕ್ ,ರಾಜಾರಾಮ ರಾವ್ ಉದ್ದಂಪಾಡಿ,ಸಹಕಾರಿ ಸಂಘದ ಉಪಾಧ್ಯಕ್ಷ ವಿಕ್ರಂ ಪೈ,ಸ್ಮರಣ ಸಂಚಿಕೆ ಸಂಪಾದಕ ಅಜಿತ್ ಗೌಡ ಐವರ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಶಾಂತರಾಮ ಕಣಿಲೆಗುಂಡಿ,ದೇವಿಪ್ರಸಾದ್ ಎನ್.ಎಸ್,ವ್ಯ.ಸ.ಮಾಜಿ ಸದಸ್ಯರಾದ ಶ್ರೀಮತಿ ಸುಗಂಧಿ ಚೆಮ್ನೂರು,ಜನಾರ್ದನ ಕೊಪ್ಪಳ,ರಾಜೇಶ್ ಭಟ್ ಬಾಂಜಿಕೋಡಿ, ಕುಶಾಲಪ್ಪ ಗೌಡ ಮಡ್ತಿಲ ಮತ್ತು ದಾಸಪ್ಪ ಗೌಡ ಕೋಡ್ತೀಲು,ಶೇಖರ ಮಡ್ತಿಲ,ಶ್ರೀಧರ ಗೌಡ ಪುತ್ತಿಲ,ದಯಾನಂದ ಚೆಮ್ನೂರು,ಕುಸುಮಾಧರ ಮಡ್ತಿಲ,ವೆಂಕಟ್ರಮಣ ಗೌಡ ಹುಲಿಮನೆ,ವೆಂಕಪ್ಪ ಗೌಡ ಜಬಳೆ,ಮಹೇಶ್ ಜಬಳೆ,ಅನಿಲ್ ಕುತ್ಯಾಡಿ,ಸುಂದರ ಗೌಡ ಚೆಮ್ನೂರು,ಸುಬ್ರಹ್ಮಣ್ಯ ಭಟ್,ನಾರಾಯಣ ಚಾಕೋಟೆ,ಚಂದ್ರಶೇಖರ ದೇವಸ್ಥಾನದ ಸಿಬ್ಬಂದಿ ಯಶವಂತ ಹಾಗೂ ಹಲವು ಜನ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.