Breaking News

ಎನ್ನೆಂಸಿ: ಯುವ ರೆಡ್‌ಕ್ರಾಸ್ ಘಟಕದಿಂದ ಕೇರಳದ ರಾಣಿಪುರಂಗೆ ಚಾರಣ

Advt_Headding_Middle
Advt_Headding_Middle

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಕೇರಳ ರಾಜ್ಯದಲ್ಲಿರುವ ರಾಣಿಪುರಂ ಬೆಟ್ಟಕ್ಕೆ ಒಂದು ದಿನದ ಚಾರಣ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕಾಲೇಜಿನ ರೆಡ್‌ಕ್ರಾಸ್ ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿಯವರ ನೇತೃತ್ವದಲ್ಲಿ ರೆಡ್‌ಕ್ರಾಸ್‌ನ 43 ಸದಸ್ಯರು ಇದರಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಅಲ್ಲಿಯ ಅರಣ್ಯ ಇಲಾಖಾ ಸಿಬ್ಬಂದಿಯವರು ರಾಣಿಪುರಂನ ವಿಶೇಷತೆಯನ್ನು ಹಾಗೂ ಬೆಟ್ಟವನ್ನು ಹತ್ತುತ್ತಾ ಹೋದ ಹಾಗೆ ಗಮನಿಸಬೇಕಾದ ಕೌತುಕಗಳ ಕುರಿತು ಮಾಹಿತಿ ನೀಡಿದರು. ಹಚ್ಚಹಸಿರಿನ ಮರಗಿಡಗಳು, ಹುಲ್ಲು,

ಬಂಡೆಕಲ್ಲುಗಳ ಮಧ್ಯೆ ಹತ್ತುತ್ತಾ, ಇಳಿಯುತ್ತಾ ಸಾಗುವಾಗಿನ ಅನುಭವ ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ನೀಡಿತ್ತು. ಬೆಟ್ಟದ ತುದಿಗೆ ತಲುಪಿದ ಬಳಿಕ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗದವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಚಿತ್ರಲೇಖಾ ಕೆ ಎಸ್ ಹಾಗೂ ಸಿಬ್ಬಂದಿ ವರ್ಗದವರಾದ, ನಿವೇದಿತಾ, ನಿಶಾ, ಕಮಲಾಕ್ಷ, ಪವನ್, ಲತಾ ಹಾಗೂ ರೆಡ್‌ಕ್ರಾಸ್‌ನ ಹಿರಿಯ ಸದಸ್ಯ ಅಭಿಜಿತ್ ಟಿ ಎಲ್ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.