ಪುತ್ತೂರಿನಲ್ಲಿ ಭಜನಾ ಸತ್ಸಂಗ ಸಮಾವೇಶ – ಸುಳ್ಯದಲ್ಲಿ ಪೂರ್ವಬಾವಿ ಸಭೆ

Advt_Headding_Middle
Advt_Headding_Middle

ಫೆ.8 : ಪುತ್ತೂರಿನಲ್ಲಿ ಭಜನಾ ಸತ್ಸಂಗ ಸಮಾವೇಶ-2020

ಸುಳ್ಯದಲ್ಲಿ ಇಂದು ಪೂರ್ವಬಾವಿ ಸಭೆ

2000 ಭಜನಾ ತಂಡಗಳು, 25000 ಭಜಕರು ಸೇರುವ ನಿರೀಕ್ಷೆ

ಶ್ರೀ ಕ್ಷೇ.ಧ.ಮಂಜುನಾಥೇಶ್ವರ ಭಜನಾ ಪರಿಷತ್ತಿನಿಂದ ಆಯೋಜನೆ

 

ಪುತ್ತೂರಿನಲ್ಲಿ ಭಜನಾ ಸತ್ಸಂಗ ಸಮಾವೇಶ – ಸುಳ್ಯದಲ್ಲಿ ಪೂರ್ವಬಾವಿ ಸಭೆ
ಖಾವಂದರ ಉಪಸ್ಥಿತಿಯಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಲಿದೆ : ಅರುಣ್ ಕುಮಾರ್ ಪುತ್ತಿಲ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿಫೆ.8ರಂದು ನಡೆಯಲಿರುವ ದ.ಕ. ಜಿಲ್ಲಾ ಮಟ್ಟದ ಭಜನಾ ಸತ್ಸಂಗ ಸಮಾವೇಶವು ಫೆ.೮ರಂದು ನಡೆಯಲಿದ್ದು, ಸುಮಾರು 2000ಕ್ಕಿಂತಲೂ ಹೆಚ್ಚು ಭಜನಾ ತಂಡಗಳು ಹಾಗೂ 25000ಕ್ಕೂ ಹೆಚ್ಚು ಭಜಕರು, ಸಾರ್ವಜನಿಕರು ಸೇರುವ ನಿರೀಕ್ಷೆಯಿದೆ ಎಂದು ಪುತ್ತೂರು ಭಜನಾ ಸತ್ಸಂಗ ಸಮಾವೇಶದ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾಹಿತಿ ನೀಡಿದರು. ಮುಂಜಾನೆಯ ಉಪಹಾರದ ಬಳಿಕ ನೋಂದಾವಣೆ ಆರಂಭಗೊಂಡು ಬಳಿಕ ಮಧ್ಯಾಹ್ನದವರೆಗೆ ಗ್ರಾಮ ವಿಕಾಸನದ ಪರಿಕಲ್ಪನೆಯಡಿ ಮತ್ತು ಭಜನೆಯಿಂದ ಬದಲಾವಣೆ ಎಂಬ ವಿಷಯದಡಿ ಗೋಷ್ಠಿಗಳು ನಡೆಯಲಿದೆ. ಮಧ್ಯಾಹ್ನದ ಭೋಜನದ ಬಳಿಕ ಪುತ್ತೂರಿನ ಮುಖ್ಯ ಪೇಟೆಯ ಮೂಲಕ ಭಜನಾ ಸಂಕೀರ್ತನಾ ಮೆರವಣಿಗೆ ನಡೆದು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಸಮಾಪನಗೊಳ್ಳಲಿದೆ. ಸ್ವಾಮೀಜಿಗಳು, ಸಚಿವರು, ಶಾಸಕರಾದಿ ಗಣ್ಯರ ಉಪಸ್ಥಿತಿಯಲ್ಲಿ ಭಜನಾ ಸತ್ಸಂಗ ನಡೆಯಲಿದ್ದು, ಸೇರಿದ ಭಜಕರಿಂದ ಭಜನೆ ನಡೆಯಲಿದೆ. ಹಾಗೂ 1 ಕೋಟಿ ಪಂಚಾಕ್ಷರಿ ಜಪ ಪಠಣ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದ್ದು, ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿ ಬರಲಿದೆ ಎಂದು ಅವರು ಹೇಳಿದರು.  
ಅವರು ಇಂದು (ಜ.16) ಸುಳ್ಯದ ಶ್ರೀ ಧರ್ಮಸ್ಥಳ ಯೋಜನಾ ಕಛೇರಿಯಲ್ಲಿ ನಡೆದ ಪುತ್ತೂರಿನಲ್ಲಿ ನಡೆಯುವ ಭಜನಾ ಸತ್ಸಂಗ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾವಿಕ ಮಾತನಾಡಿದರು.
ಸಭೆಯ ಉದ್ಘಾಟನೆಯನ್ನು ಪುತ್ತೂರು ಭಜನಾ ಸತ್ಸಂಗ ಸ್ವಾಗತ ಸಮಿತಿಯ ಅಧ್ಯಕ್ಷ ಧನ್ಯಕುಮಾರ್ ನೆರವೇರಿಸಿದರು. ಶ್ರೀ ಧರ್ಮಸ್ಥಳ ಭಜನಾ ಪರಿಷತ್‌ನ ಕಾರ್ಯದರ್ಶಿಗಳಾದ ಜಯರಾಮ ನೆಲ್ಲಿತ್ತಾಯ ಚರ್ಚೆ ನಡೆಸಿಕೊಟ್ಟರು. ಶ್ರೀ ಕ್ಷೆ.ಧ.ಗ್ರಾ.ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಮಾತನಾಡಿ ಭಜನೆಯಿಂದ ಧರ್ಮಜಾಗೃತಿಯಾಗುವುದಲ್ಲದೇ ಕಟ್ಟ ಕಡೆಯ ವ್ಯಕ್ತಿಯೂ ತನ್ನ ಜೀವನದಲ್ಲಿ ಸಂಸ್ಕಾರಯುತ ಜೀವನ ನಡೆಸಬಹುದಾಗಿದೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ಡಿ.ಜೆ ಸೌಂಡ್ ನಂತಹ ಕೆಟ್ಟ ಸಂಪ್ರದಾಯದ ಬದಲು ಭಜನೆಯಂತಹ ಧಾರ್ಮಿಕ ಕಾರ್ಯಗಳನ್ನು ತೊಡಗಿಸಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಪುತ್ತೂರಿನಲ್ಲಿ ನಡೆಯುವ ಭಜನಾ ಸತ್ಸಂಗದಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರು ತಾಲೂ ಭಜನಾ ಪರಿಷತ್ ಅಧ್ಯಕ್ಷ ಸುಬ್ಬಯ್ಯ ರೈ, ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ವಿಶ್ವನಾಥ ರೈ ಕಳಂಜ, ಸುಳ್ಯ ತಾಲೂಕು ಭಜನಾ ಪರಿಷತ್ ಸ್ಥಾಪಕಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ಜನಜಾಗೃತಿ ವೇದಿಕೆಯ ನಿಕಟಪೂರ್ವಧ್ಯಕ್ಷ ಪಿ.ಸಿ.ಜಯರಾಮ, ಪದ್ಮನಾಭ ಶೆಟ್ಟಿ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯಧ್ಯಾಕ್ಷರುಗಳು, ಜನಜಾಗೃತಿ ಸಮಿತಿಯ ವಲಯಾಧ್ಯಕ್ಷರುಗಳು, ಒಕ್ಕೂಟಗಳ ಪದಾಧಿಕಾರಿಗಳು, ವಿವಿಧ ಭಜನಾ ಮಂಡಳಿ, ದೈವ-ದೇವಸ್ಥಾನ, ನವಜೀವನ ಸಂಘಗಳ ಪದಾಧಿಕಾರಿಗಳು, ಉಪಸ್ಥಿತರಿದ್ದರು. ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ಸ್ವಾಗತಿಸಿ, ಬೆಳ್ಳಾರೆ ವಲಯ ಮೇಲ್ವಿಚಾರಕ ಮುರಳೀಧರ ವಂದಿಸಿದರು. ಗುತ್ತಿಗಾರು ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಸಹಕರಿಸಿದರು.’

ವರದಿ: ದಯಾನಂದ ಕೊರತ್ತೋಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.