ಕುಕ್ಕುಜಡ್ಕ: ಉಚಿತ ನೇತ್ರ, ಹೃದಯ ತಪಾಸಣಾ ಶಿಬಿರ, ಮಣ್ಣಿನ ಪೋಷಕಾಂಶ ಪರೀಕ್ಷೆ, ಮಾಹಿತಿ

Advt_Headding_Middle
Advt_Headding_Middle

ಮಂಗಳೂರು ಕೆಮಿಕಲ್ಸ್ & ಫರ್ಟಿಲೈಸರ್ಸ್ ಲಿ., ಕೆ.ಎಸ್. ಹೆಗ್ಡೆ ಚಾರಿಟಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಹಾಗೂ ಗರುಡ ಯುವಕ ಮಂಡಲ ಚೊಕ್ಕಾಡಿ ಇದರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಮತ್ತು ಹೃದಯ ತಪಾಸಣಾ ಶಿಬಿರ ಮತ್ತು ಮಣ್ಣಿನ ಪೋಷಕಾಂಶಗಳ ಪರೀಕ್ಷೆ ಮತ್ತು ಮಾಹಿತಿ ಕಾರ್ಯಕ್ರಮ ಜ.12 ರಂದು ಕುಕ್ಕುಜಡ್ಕದ ದ.ಕ.ಜಿ.ಪ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ಸುಳ್ಯ ಶಾಸಕ ಎಸ್. ಅಂಗಾರ ಕಾರ್ಯಕ್ರಮ ಉದ್ಘಾಟಿಸಿ ” ಮನುಷ್ಯನಿಗೆ ರೋಗ ಬಾರದೇ ಇರುವ ಹಾಗೆ ತಡೆಗಟ್ಟಲು ಇಂತಹ ಶಿಬಿರಗಳು ಸಹಕಾರಿಯಾಗಿದ್ದು, ಜನ ಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸೀತಾ ಹೆಚ್. ವಹಿಸಿದ್ದರು. ಎಂ.ಸಿ.ಎಫ್. ಮಂಗಳೂರು ಇದರ ಡೆಪ್ಯುಟಿ ಜನರಲ್ ಮ್ಯಾನೇಜರ್ ಡಾ. ಆದರ್ಶ, ಚೀಫ್ ಜನರಲ್ ಮ್ಯಾನೇಜರ್ ಗಿರೀಶ್, ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ನೇತ್ರ ತಜ್ಞ ಡಾ. ವಿಜಯ ಪೈ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸವಿತಾ ಪಡ್ಪು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಘವ ಕೆ, ಗರುಡ ಯುವಕ ಮಂಡಲ ಚೊಕ್ಕಾಡಿ ಇದರ ಅಧ್ಯಕ್ಷ ಸತೀಶ್ ಪಿಲಿಕಜೆ, ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಉಷಲತಾ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂ.ಸಿ.ಎಫ್ ನ ಜಂಟಿ ಜನರಲ್ ಮ್ಯಾನೇಜರ್ ಬಿ. ಕೃಷ್ಣಪ್ಪ ಸ್ವಾಗತಿಸಿ, ಗರುಡ ಯುವಕ ಮಂಡಲದ ಗೌರವಾಧ್ಯಕ್ಷ ಮುರಳಿ ವಂದಿಸಿದರು. ಎಂ.ಸಿ.ಎಫ್. ವೈದ್ಯಕೀಯ ವಿಭಾಗದ ಡಿ.ಜಿ.ಎಂ. ಡಾ. ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಮರಮುಡ್ನೂರು ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಸಂಘ ಸಂಸ್ಥೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಎಂ.ಸಿ.ಎಫ್ ಚೀಫ್ ಮ್ಯಾನೇಜರ್ ಡಾ. ನಿರಂಜನ್ ಮತ್ತು ಡಿ.ಜಿ.ಎಂ. ಡಾ. ಯೋಗೀಶ್ ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು. ಉಚಿತ ನೇತ್ರ ಮತ್ತು ಹೃದಯ ತಪಾಸಣಾ ಶಿಬಿರದಲ್ಲಿ ೨೭೦ ಮಂದಿ ತಪಾಸಣೆ ಮಾಡಿಸಿಕೊಂಡರು. ೧೨೦ ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು. ೩೦ ಮಂದಿಯನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಗುರುತಿಸಲಾಯಿತು. ೪೫ ಮಂದಿ ರೈತರು ಮಣ್ಣು ಪರೀಕ್ಷೆಗೆ ಮಣ್ಣು ನೀಡಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.