ಪೆರಾಜೆ : ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ

Advt_Headding_Middle
Advt_Headding_Middle


ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 7.20 ಕೋಟಿ ಶಾಸಕರ ಅನುದಾನದಡಿ ವಿವಿಧ ಅಭಿವೃದ್ಧಿಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ರವರು ಜ. 16 ರಂದು ಚಾಲನೆ ನೀಡಿದರು.

ಬಂಗಾರಕೋಡಿ, ಕರಿಬುತನ ಕೋಡಿ ರಸ್ತೆ ಕಾಂಕ್ರೀಟಿಕರಣ, ಅಡ್ಕ ಸೇತುವೆ, ಪೆರಾಜೆ ಶ್ರೀ ಶಾಸ್ತವು ದೇವಸ್ಥಾನದ ತಡೆಗೋಡೆ, ಕುಂಬಳಚೇರಿ ವಯನಾಟ್ ಕುವನ್ ದೈವಸ್ಥಾನದ ತಡೆಗೋಡೆಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕೊಡಗು ಜಿ.ಪಂ ಅಧ್ಯಕ್ಷ ಹರೀಶ್ ಬಿ, ಶ್ರೀಮತಿ ಕವಿತಾ ಪ್ರಭಾಕರ್, ತಾ.ಪಂ ಅಧ್ಯಕ್ಷೆ ಶ್ರೀಮತಿ ಶೋಭಾ ಮೋಹನ್, ತಾ.ಪಂ ಸದಸ್ಯ ನಾಗೇಶ್ ಕುಂದಲ್ಪಾಡಿ, ಎ.ಇ.ಇ ಶ್ರೀಕಂಠಯ್ಯ, ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಧರಣಿಧರ, ಉಪಾಧ್ಯಕ್ಷರಾದ ಧೀನರಾಜ್ ದೊಡ್ಡಡ್ಕ, ಮೋನಪ್ಪ ನಿಡ್ಯಮಲೆ, ಶೇಷಪ್ಪ ನಿಡ್ಯಮಲೆ, ನಂಜಪ್ಪ ನಿಡ್ಯಮಲೆ, ಚಿನ್ನಪ್ಪ ಅಡ್ಕ, ಪ್ರಕಾಶ್ ದೊಡ್ಡಡ್ಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.