Breaking News

ಸುಳ್ಯದಲ್ಲಿ ವಿಖಾಯ ಕಾರ್ಯಕರ್ತರ ಸ್ನೇಹ ಸಮ್ಮಿಲನ

Advt_Headding_Middle
Advt_Headding_Middle

SKSSF ವಿಖಾಯ ಸಮಿತಿಯ ವತಿಯಿಂದ ವಿಖಾಯ ಕಾರ್ಯಕರ್ತರ ಸ್ನೇಹಸಮ್ಮಿಲನ ಹಾಗೂ ನೂತನ ಶಾಖಾ ಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭವು ಸುಳ್ಯ ಸುಪ್ರೀಂ ಕಾಂಪೌಂಡ್ ನಲ್ಲಿ ಜ.  17 ರಂದು ನಡೆಯಿತು.

ಐವರ್ನಾಡು ಮಸೀದಿಯ ಖತೀಬ್ ಉಸ್ತಾದ್,ಅಬ್ದುಲ್ ಲತೀಫ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.


ಸುಳ್ಯ ವಲಯ SKSSF ಅಧ್ಯಕ್ಷರಾದ ಹಸ್ಸನ್ ಆರ್ಷದಿ ಸಮಸ್ಥದ ಕಾರ್ಯವೈಖರಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಕಾರ್ಯಕರ್ತರಿಗೆ ತರಭೇತಿ ನೀಡಿದರು.
ವಿಖಾಯ ಕಾರ್ಯಕರ್ತರ ಹೊಣೆಗಾರಿಕೆ ಹಾಗೂ ಮಾಡಬೇಕಾದ ಕೆಲಸಕಾರ್ಯಗಳ ಬಗ್ಗೆ
ಅಜ್ಜಾವರ ಖತೀಬ್ ಉಸ್ತಾದ್, ಉಮ್ಮರ್ ಫೈಝಿ ನೆಲ್ಯಾಡಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮದ್ರಸಾ ಮೆನೇಜ್ ಮೆಂಟ್ ಅಧ್ಯಕ್ಷರಾದ ತಾಜ್ ಮಹಮ್ಮದ್ ಸಂಪಾಜೆ
ಸುನ್ನಿ ಮಹಲ್ ಫೆಡರೇಷನ್ ಸುಳ್ಯ ಇದರ ಅಧ್ಯಕ್ಷರಾದ ಖತ್ತರ್ ಇಬ್ರಾಹಿಂ ಹಾಜಿ,
SYS ಅಧ್ಯಕ್ಷರಾದ ಹಮೀದ್ ಹಾಜಿ ಸುಳ್ಯ, ಬೆಳ್ಳಾರೆ ಶಂಸುಲ್ ಉಲಮಾ ಟ್ರಸ್ಟ್ ಅಧ್ಯಕ್ಷರಾದ ಮಂಗಳ ಅಬೂಬಕ್ಕರ್ ರಝಾಕ್ ಉಸ್ತಾದ್ ಅಜ್ಜಾವರ, ಶಾಫಿ ಮುಕ್ರಿ,ಫಾರೂಕ್ ಅಡ್ಕ
ಕಳಂದರ್ ಎಲಿಮಲೆ,ಷರೀಫ್ ಅಜ್ಜಾವರ,ತಾಜುದ್ದೀನ್ ಆರಂತೋಡು,ಹಾಗೂ ಸುಮಾರು ನೂರೈವತ್ತು ಜನ ವಿಖಾಯ ಕಾರ್ಯಕರ್ತರು ಭಾಗವಹಿಸಿದ್ದರು.
ವಿಖಾಯ ಕನ್ವೀನರ್ ತಾಜುದ್ದೀನ್ ಟರ್ಲಿ ಸ್ವಾಗತಿಸಿ, ಚೇರ್ಮನ್ ಜಮಾಲ್ ಬೆಳ್ಳಾರೆ ವಂದಿಸಿದರು. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.