HomePage_Banner
HomePage_Banner

ಜ. 19 ರಂದು ಪಲ್ಸ್ ಪೋಲಿಯೋ : ಸುಳ್ಯದಲ್ಲಿ ಜಾಗೃತಿ ಜಾಥಾ


ಜ.19 ರಂದು ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪ್ರಯುಕ್ತ ಜಾಗೃತಿ ಜಾಥಾ ಸುಳ್ಯ ನಗರದಲ್ಲಿ ನಡೆಯಿತು. ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಆರಂಭಗೊಂಡ ಈ ಜಾಥಾಕ್ಕೆ ಸುಳ್ಯ ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಚಾಲನೆ ನೀಡಿದರು.

ತಾಲೂಕು ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಸುಬ್ರಹ್ಮಣ್ಯ ಹೊಳ್ಳ, ಡಾ. ಪುರುಷೋತ್ತಮ್ ಕೆ.ಜಿ., ವೈದ್ಯರ ಸಂಘದ ಅಧ್ಯಕ್ಷ ಶ್ರೀಕೃಷ್ಣ ಭಟ್, ಕಾರ್ಯದರ್ಶಿ ಡಾ. ರವಿಶಂಕರ್, ಕೋಶಾಧಿಕಾರಿ ಡಾ. ಗಣೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಉಪನ್ಯಾಸಕಿ ಕು. ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು. ಜಾಥಾವು ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಆರಂಭಗೊಂಡು ಮುಖ್ಯ ರಸ್ತೆಯಾಗಿ ಸಾಗಿ ಕೆವಿಜಿ ಕ್ಯಾಂಪಸ್‌ನಲ್ಲಿ ಸಮಾಪನಗೊಂಡಿತು. ಕೆವಿಜಿ ಸಮೂಹ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ವೈದ್ಯದ ಸಂಘದ ಪದಾಧಿಕಾರಿಗಳು, ಎನ್‌ಸಿಸಿ, ಎನ್‌ಎಸ್‌ಎಸ್ ಘಟಕದವರು, ರೋಟರಿ ಕ್ಲಬ್ ಸುಳ್ಯ, ಇನ್ನರ್‌ವ್ಹೀಲ್ ಕ್ಲಬ್‌ನವರು ಜಾಥಾದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.