ಭಜನೆಯಿಂದ ವಿಭಜನೆ ಇಲ್ಲ: ಮೋಹನದಾಸ ಪರಮಹಂಸ ಸ್ವಾಮೀಜಿ

Advt_Headding_Middle
Advt_Headding_Middle

“ಭಜನೆಯಿಂದ ವಿಭಜನೆ ಇಲ್ಲ. ಸಮಾಜಕ್ಕೆ ಕೆಡುಕಿಲ್ಲ. ಸಹಮತ, ಸಹಬಾಳ್ವೆ, ಸಮಾನತೆ, ಮಾನವೀಯ ಮೌಲ್ಯಗಳು, ಸದ್ಗುಣ ಶೀಲತೆ ಭಜನೆಯಿಂದ ಪಡೆಯಲು ಸಾಧ್ಯ. ದೇವರು ಕೊಟ್ಟ ಮಾನವ ಜನ್ಮವನ್ನು ಹರಿನಾಮ ಸಂಕೀರ್ತನೆಯನ್ನು ಹಾಡುತ್ತಾ ಸತ್ಕರ್ಮಗಳನ್ನು ಮಾಡಿ ಸದ್ಬಳಕೆ ಮಾಡಿಕೊಳ್ಳೋಣ” ಎಂದು ಶ್ರೀಧಾಮ ಮಾಣಿಲದ ಸ್ವಾಮೀಜಿ ಪರಮಪೂಜ್ಯ ಯೋಗಿ ಕೌಸ್ತುಭ ಕರ್ಮಯೋಗಿ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ಜ. ೧೪ರಂದು ಶ್ರೀ ದುರ್ಗಾ ಭಜನಾ ಮಂಡಳಿ ಮರಕತ, ನಡುಗಲ್ಲು ಇದರ ಆಶ್ರಯದಲ್ಲಿ ನಡೆದ ೧೩ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಭಜನೆ, ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತರನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದುರ್ಗಾ ಭಜನಾ ಮಂಡಳಿಯ ಅಧ್ಯಕ್ಷ ಪ್ರಭಾಕರ ಪಡ್ರೆ ವಹಿಸಿ ನಡುಗಲ್ಲಿನಲ್ಲಿ ಯುವಕ ಮಂಡಲದ ಸಭಾಂಗಣ ನಿರ್ಮಾಣ ಮಾಡಬೇಕಿದೆ. ಅದಕ್ಕಾಗಿ ರೂ. ೫೦ ಸಾವಿರ ಧನಸಹಾಯ ಭಜನಾ ಮಂಡಳಿ ವತಿಯಿಂದ ನೀಡಲಾಗುವುದು ಎಂದರಲ್ಲದೆ ಸಾರ್ವಜನಿಕರೂ ಸಹಕಾರ ನೀಡುವಂತೆ ಕೇಳಿಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲು ಮತ್ತು ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್ ಶುಭ ಹಾರೈಸಿದರು. ಭಜನಾ ಮಂಡಳಿ ಕಾರ್ಯದರ್ಶಿ ಧರ್ಮಪಾಲ ಚಾರ್ಮತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನಾ ಮಂಡಳಿಯ ಪೂರ್ವಾಧ್ಯಕ್ಷ ಚಂದ್ರಶೇಖರ ಬಾಳುಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಶ್ಲೇಷ ಪಡ್ರೆ ಪ್ರಾರ್ಥಿಸಿದರು. ನಾಲ್ಕೂರು ಗ್ರಾ.ಪಂ. ಸದಸ್ಯ ವಿಜಯಕುಮಾರ್ ಸ್ವಾಗತಿಸಿ, ಹರೀಶ್ಚಂದ್ರ ಕುಳ್ಳಪ್ಪಾಡಿ ವಂದಿಸಿದರು. ಹರ್ಷಿತ್ ಪಡ್ರೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದಲ್ಲಿ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಪ್ರತಿಭೆಗಳಾದ ದೀಪ್ತಿ ಹೆಚ್.ಎಸ್, ರಕ್ಷಾ ಅಂಬೆಕಲ್ಲು, ಪ್ರಜ್ಞಾ ಪಿ.ಆರ್, ಹರ್ಷಿತ್ ಎ.ಸಿ, ದೀಪಾ ಹೆಚ್.ಎಸ್, ಅಪೂರ್ವ ಪಾಲ್ತಾಡು, ಯಶ್ವಿತ್ ಸಿ.ಎ, ದಿವ್ಯ ಎನ್.ಕೆ, ಆಶ್ಲೇಷ ಪಡ್ರೆ, ಚರಣ್ ಉತ್ರಂಬೆ, ರೋಶನ್ ಸಂಪ್ಯಾಡಿ ಮತ್ತು ಹಿರಿಯ ಕ್ರೀಡಾಪಟು ಶ್ರೀಮತಿ ಮಮತಾ ಉತ್ರಂಬೆಯವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಮೊದಲು ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾ ಭಜನಾ ಮಂಡಳಿ ಮರಕತ, ನಡುಗಲ್ಲು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮದ ಬಳಿಕ ಭೂಮಿ ಕ್ರಿಯೇಶನ್ಸ್ ಮಂಗಳೂರು ಅರ್ಪಿಸುವ ದಿವ್ಯ ಭಟ್ ಪೆರ್ವೋಡಿ ಕುಂಬಳೆ ಇವರಿಂದ ‘ಶಿಬಿ ಚಕ್ರವರ್ತಿ ಕಥೆ’ ಹಾಗೂ ಝೀ ಕನ್ನಡ ಡ್ರಾಮಾ ಜೂನಿಯರ್ ಸೀಸನ್ ೨ ವಿನ್ನರ್ ಜೂನಿಯರ್ ಲಕ್ಮ್ಷೀ ಖ್ಯಾತಿಯ ಕು. ವಂಶಿ ರತ್ನಕುಮಾರ್‌ರವರಿಂದ ‘ಕಲೋತ್ಸವ’ ವಿಭಿನ್ನ ಕಾರ್ಯಕ್ರಮ ನಡೆಯಿತು.
ಚಿತ್ರ: ಶಾಂತಳಾ ಸುಬ್ರಹ್ಮಣ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.