ಜೇಸಿ ಅಶೋಕ್ ಚೂಂತಾರು ರಾಷ್ಟ್ರೀಯ ಸಂಯೋಜಕರಾಗಿ ಆಯ್ಕೆ

Advt_Headding_Middle
Advt_Headding_Middle

 

ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವದ್ಯಕ್ಷ, ಮೂರು ಜಿಲ್ಲೆವ್ಯಾಪ್ತಿಯ ಜೇಸಿಐ ವಲಯ ಹದಿನೈದರ ನಿಕಟಪೂರ್ವದ್ಯಕ್ಷ ಜೇಸಿಐ ಪಿಪಿಪಿ ಅಶೋಕ್ ಚೂಂತಾರುರವರನ್ನು ಜೇಸಿಐ ರಾಷ್ಟ್ರೀಯ ಅಧ್ಯಕ್ಷರು ಜೇಸಿಐ ಸೆನೆಟರ್ ಅನಿಷ್ ಮ್ಯಾಥ್ಯುರವರು 2020 ಸಾಲಿನ ಜೇಸಿಐ ಭಾರತದ ಕಾರ್ಯಕ್ರಮ ವಿಭಾಗದ ಶಾಶ್ವತ ಕಾರ್ಯಕ್ರಮಗಳ ರಾಷ್ಟ್ರೀಯ ಸಂಯೋಜಕರಾಗಿ ನೇಮಕಮಾಡಿ ಆದೇಶ ನೀಡಿದ್ದಾರೆ.

38 ವರ್ಷಗಳಿಂದ ಸುಳ್ಯ ಪರಿಸರದಲ್ಲಿ ಹಲವಾರು ನಾಯಕರುಗಳನ್ನು ಸಮಾಜಕ್ಕೆ ನೀಡಿದ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ಈ ಗೌರವ ಸಿಕ್ಕಿದಾಗಿದೆ. ಪ್ರಗತಿಪರ ಕ್ರಷಿಕರಾಗಿರುವ ಶ್ರೀಯುತರು ಎರಡು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಸರಕಾರದಿಂದ ನಾಮನಿರ್ದೇಶಿತ ಕೆಡಿಪಿ ಸದಸ್ಯರಾಗಿ ಸೇವೆ ಸಲ್ಲಿಸಿದುದಲ್ಲದೇ, 2019ರಲ್ಲಿ ಜೇಸಿಐ ವಲಯ ಹದಿನೈದರ ವಲಯಾದ್ಯಕ್ಷ ಅತ್ಯುತ್ತಮ ವಲಯಾದ್ಯಕ್ಷ ರಾಷ್ಟ್ರೀಯ ಪ್ರಶಸ್ತಿಗೆ ಬಾಜನರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.