Breaking News

ಗುತ್ತಿಗಾರು: ವೀರಮಾರುತಿ ಸ್ಪೋಟ್ಸ್ ಕ್ಲಬ್ 16 ನೇ ವರ್ಷದ ಕಬಡ್ಡಿ ಪಂದ್ಯಾಟ

Advt_Headding_Middle
Advt_Headding_Middle

ವೀರಮಾರುತಿ ಗುತ್ತಿಗಾರು ಪ್ರಥಮ

 

 

ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ವತಿಯಿಂದ ೧೬ ನೇ ವರ್ಷದ ಕಬಡ್ಡಿ ಪಂದ್ಯಾಟ ಸ.ಮಾ.ಹಿ.ಪ್ರಾ.ಶಾಲೆ ಇಲ್ಲಿ ನಡೆಯಿತು.

ಬೆಳಗ್ಗೆ ರಸ್ತೆ ಓಟ ನಡೆದು ಬಳಿಕ ಕಬಡ್ಡಿ ಪಂದ್ಯಾಟ ಉದ್ಘಾಟನೆಯಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭ ಮತ್ತು ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷ ವಿಜೇಶ್ ಹಿರಿಯಡ್ಕ ವಹಿಸಿದ್ದರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಲವರನ್ನು ಸನ್ಮಾನಿಸಿ ಅಭಿನಂದಿಸಿದರು.

ಗೋಪಾಲಕೃಷ್ಣ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ದುಗ್ಗಪ್ಪ ಮಾಸ್ತರ್ ಕುಳ್ಳಂಪಾಡಿ, ಅಂತಾರಾಷ್ಟ್ರೀಯ ಕ್ರೀಡಾಪಟು ನಮಿತಾ ಗೋಳ್ಯಾಡಿ, ಇವರುಗಳನ್ನು ಸನ್ಮಾನಿಸಲಾಯಿತು. ಭಗವತಿ ಜನರಲ್ ಸ್ಟೋರ್ ಗುತ್ತಿಗಾರು ಇದರ ಮಾಲಕ ಶಂಕರ ಉತ್ರಂಬೆ ಅವರನ್ನು ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಜಿ.ಪಂ ಸದಸ್ಯ ವೆಂಕಟ್ ದಂಬೆಕೋಡಿ, ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯಾಧ್ಯಕ್ಷ ರತನ್ ಶೆಟ್ಟಿ, ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ ಮಾಧವ ಉಪಸ್ಥಿತರಿದ್ದರು. ಗೌರವ ಉಪಸ್ಥಿತಿಯಲ್ಲಿ ಕಿರಣ್ ಬುಡ್ಲೆಗುತ್ತು, ಕೇಶವ ಹೊಸೋಳಿಕೆ , ಶಿವಪ್ರಕಾಶ್ ಕಡಪಳ, ನಿರ್ಮಲಾ ಪುರುಷೋತ್ತಮ ಕಡ್ತಲ್ ಕಜೆ, ಚಿದಾನಂದ ಕನ್ನಡ್ಕ, ಪ್ರವೀಣ್ ಚಿಲ್ಪಾರು, ಡಿ.ಆರ್ ಯೋಗೀತ್ ಕುಮಾರ್ ದೇವಶ್ಯ, ರಾಧಾಕೃಷ್ಣ ಕೋರಂಬಟ, ದೇವಿಪ್ರಸಾದ್ ತುಂಬುತ್ತಾಜೆ, ಜಯರಾಮ ಪೈಕ, ವಸಂತ ಗೌಡ ಬೊಳ್ಳಾಜೆ, ಅನಿಲ್ ಕುಮಾರ್, ಲೋಹಿತ್ ಚೈಪೆ’ ಚರಣ್ ದೇರಪಜ್ಜನ ಮನೆ, ದಾಮೋಧರ ತುಪ್ಪದ ಮನೆ, ತೇಜಪ್ಪ ಮಾಸ್ತರ್, ಕಿಶೋರ್ ಕುಮಾರ್ ಪೈಕ, ಶ್ರೀದೇವಿ ಕೊಂಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಕಿಶೋರ್ ಕುಮಾರ್ ಪೈಕ ಪ್ರಸ್ತಾವನೆ ಮಾಡಿ, ಸತೀಶ್ ಮೂಕಮಲೆ ಸ್ವಾಗತಿಸಿದರು, ಮಾಧವ ಎರ್ದಡ್ಕ ವಂದಿಸಿದರು. ಶಿವಪ್ರಸಾದ್ ಹಾಲೆಮಜಲು ಕಾರ್ಯಕ್ರಮ ನಿರೂಪಿಸಿದರು


ಫಲಿತಾಂಶ:
65 ಕೆ.ಜಿ ಪುರುಷರ ವಿಭಾಗ ಕಬಡ್ಡಿಯಲ್ಲಿ ವೀರಮಾರುತಿ ಗುತ್ತಿಗಾರು, ನ್ಯೂ ಶೈನಿ ಬೆಳ್ಳಾರೆ, ವನದುರ್ಗ ಕುಂಜತ್ತಾಡಿ, ಎಸ್ ಎಪ್ ಸಿ ಕೂಟೇಲು ಬಹುಮಾನ ಪಡೆದರೆ.
17 ವಯೋಮಾನದ ಬಾಲಕರ ವಿಭಾಗದಲ್ಲಿ ವೀರಮಾರುತಿ ಗುತ್ತಿಗಾರು, ಎಸ್ ಎಸ್ ಪಿ ಯು ಸುಬ್ರಹ್ಮಣ್ಯ, ಸರ್ಕಾರಿ ಪ್ರೌಢಶಾಲೆ ಎಣ್ಮೂರು, ಎನ್ ಎಂ ಪಿ ಯು ಸಿ ಅರಂತೋಡು, ಬಹುಮಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಜ್ಞಾನದೀಪ ಎಲಿಮಲೆ, ಜಿ ಪಿಯುಸಿ ಗುತ್ತಿಗಾರು’ ದುರ್ಗಾಂಬಾ ಹೈಸ್ಕೂಲ್ ಅಲಂಕಾರು, ಪ್ರಗತಿ ಕಾಣಿಯೂರು ಬಹುಮಾನ ಪಡೆದವು. 14 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶ್ರೀರಾಮ ಕಲ್ಲಡ್ಕ, ಎಸ್ ವಿ ಎಂ ನರಿಮೊಗರು, ಜ್ಞಾನದೀಪ ಎಲಿಮಲೆ, ಕುಮಾರಸ್ವಾಮಿ ಸುಬ್ರಹ್ಮಣ್ಯ ಬಹುಮಾನ ಪಡೆದವು. ಬಾಲಕಿಯರ ವಿಭಾಗದಲ್ಲಿ ಪ್ರಗತಿ ಕಾಣಿಯೂರು, ಸ. ಮಾ. ಹಿ. ಪ್ರಾ. ಶಾಲೆ ಗುತ್ತಿಗಾರು, ಎಸ್ ವಿ ಎಂ ನರಿಮೊಗರು, ಜ್ಞಾನದೀಪ ಎಲಿಮಲೆ ತಂಡಗಳು ಬಹುಮಾನ ಪಡೆದವು.
೯ ರ ವಯೋಮಾನದ ರಸ್ತೆ ಓಟದಲ್ಲಿ ಬಾಲಕರ ವಿಭಾಗದಲ್ಲಿ ರೆನ್ವಿತ್, ರಚಿತ್, ಚಿನ್ಮಯ್, ಹಿತೇಶ್, ಚೇತನ್ ಬಹುಮಾನ ಪಡೆದರೆ ಬಾಲಕಿಯರ ವಿಭಾಗದಲ್ಲಿ ವೈಷ್ಣವಿ, ವೇಷ್ಣಿ, ವರ್ಷಿಣಿ ಬಹುಮಾನ ಪಡೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.