ಆಲೆಟ್ಟಿ ಸಹಕಾರಿ ಸಂಘದ ಚುನಾವಣೆಗೆ 31 ಮಂದಿ ನಾಮಪತ್ರ ಸಲ್ಲಿಕೆ

Advt_Headding_Middle
Advt_Headding_Middle

 

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಜ.25 ರಂದು ನಡೆಯಲಿದ್ದು ಒಟ್ಟು 31 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಜ.18 ರಂದು ನಾಮಪತ್ರ ಪರಿಶೀಲನೆ ನಡೆಯಿತು. ಎಲ್ಲಾ ನಾಮಪತ್ರಗಳು ಕ್ರಮಬದ್ದವಾಗಿದ್ದವು.ಸಹಾಯಕ  ಚುನಾವಣಾಧಿಕಾರಿ ಕಾವ್ಯ ನಾಮಪತ್ರ ಪರಿಶೀಲಿಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನಕರ ರವರು ಸಹಕರಿಸಿದರು.
ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ಉಪಸ್ಥಿತರಿದ್ದರು.ನಾಮಪತ್ರ ಹಿಂತೆಗೆಯಲು ಜ.19 ರವರೆಗೆ ಕಾಲಾವಕಾಶ ನೀಡಲಾಗಿದೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಅದೇ ದಿನ ನೀಡಲಾಗುವುದೆಂದು ಅಧಿಕಾರಿಯವರು ತಿಳಿಸಿದರು. ಚುನಾವಣಾ ಕಣದಲ್ಲಿ ಒಟ್ಟು 31 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿ.ಜೆ.ಪಿ.ಬೆಂಬಲಿತ ಸಹಕಾರ ಭಾರತಿ 17 ಮಂದಿ ಅಭ್ಯರ್ಥಿಗಳಾದ ಶ್ರೀಪತಿ ಭಟ್ ಮಜಿಗುಂಡಿ, ಜಯಪ್ರಕಾಶ ಕುಂಚಡ್ಕ, ಹರೀಶ್ ರಂಗತ್ತಮಲೆ, ಸುಧಾಕರ ಆಲೆಟ್ಟಿ, ಶಿವರಾಮ ಕಾಪುಮಲೆ, ಗಂಗಾಧರ ನೆಡ್ಚಿಲು, ಕರುಣಾಕರ ಹಾಸ್ಪಾರೆ, ಸುದರ್ಶನ ಪಾತಿಕಲ್ಲು, ಶ್ರೀಮತಿ ಶ್ರೀದೇವಿ ಭಟ್ ಮಜಿಗುಂಡಿ, ಶ್ರೀಮತಿ ವೇದಾವತಿ ಆಲೆಟ್ಟಿ, ವೈಕುಂಠ ನಾಯಕ್ ದೋಣಿಮೂಲೆ, ಶ್ರೀಧರ ಕೂಳಿಯಡ್ಕ, ಅನುಪಮ ಬಳ್ಯಾಡಿ, ಸೂರ್ಯ ನಾರಾಯಣ ನಾಯಕ್ ಅಂಜಿಕ್ಕಾರ್, ಬಾಲಕೃಷ್ಣ ಕೆ.ಎಸ್. ಕುಂಚಡ್ಕ, ಜಗದೀಶ್ ಕೂಳಿಯಡ್ಕ ರವರು ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ 6 ಮಂದಿ ಅಭ್ಯರ್ಥಿಗಳಾದ ಬಾಪೂ ಸಾಹೇಬ್ ಪರಿವಾರಕಾನ, ಸತ್ಯ ಕುಮಾರ್ ಆಡಿಂಜ, ಅಬ್ದುಲ್ ಖಾದರ್ ಆಲೆಟ್ಟಿ, ಪ್ರಸನ್ನ ಕೆ ಸಿ ಬಡ್ಡಡ್ಕ, ಚಂದ್ರಕಾಂತ್ ನಾರ್ಕೋಡು, ಸೀತಾರಾಮ ಕಣಕ್ಕೂರು ರವರ ನಾಮಪತ್ರ ಸಲ್ಲಿಸಿರುತ್ತಾರೆ. ರೈತ ಸಂಘ ಬೆಂಬಲಿತ 6 ಮಂದಿ ಅಭ್ಯರ್ಥಿಗಳಾದ ಲೋಲಜಾಕ್ಷ ಭೂತಕಲ್ಲು, ಹರಿಪ್ರಸಾದ್ ಗಬ್ಬಲ್ಕಜೆ, ಅರುಣ ಕುಮಾರಿ ಮೈಂದೂರುಕಾನ, ಯಶೋಧ ಕೆ.ಯು.ಕುಡೆಕಲ್ಲು, ಜನಾರ್ಧನ ಗೌಡ ನಾರ್ಕೋಡು, ಮಹೇಶ್ ಬಿ.ಅರಂಬೂರು ರವರು ನಾಮಪತ್ರ ಸಲ್ಲಿಸಿರುತ್ತಾರೆ.ಪಕ್ಷೇತರ ಅಭ್ಯರ್ಥಿಗಳಾದ ಕೃಪಾಶಂಕರ ತುದಿಯಡ್ಕ , ತೇಜಕುಮಾರ್ ಬಡ್ಡಡ್ಕ ರವರು ನಾಮಪತ್ರ ಸಲ್ಲಿಸಿರುತ್ತಾರೆ.

ಸಾಲಗಾರರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಯಾಗಿ ತಂಗವೇಲು ಕೆ ನಾಗಪಟ್ಟಣ ರವರು ನಾಮಪತ್ರ ಸಲ್ಲಿಸಿದ್ದು ಪ್ರತಿಸ್ಪರ್ಧಿ ಇಲ್ಲದೇ ಇದ್ದುದರಿಂದ ಅವಿರೋಧವಾಗಿ ಆಯ್ಕೆ ಯಾಗುವ ಸಾಧ್ಯತೆ ಇದೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.