ಕಂದ್ರಪ್ಪಾಡಿ ದೇವರ ಝರಿ ಶ್ರೀ ನಾಗರಾಜ ರಕ್ತೇಶ್ವರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Advt_Headding_Middle
Advt_Headding_Middle

 

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ದೇವರ ಝರಿ ಕ್ಷೇತ್ರದಲ್ಲಿ ಶ್ರೀ ನಾಗರಾಜ, ನಾಗರಾಣಿ – ರಕ್ತೇಶ್ವರೀ ಹಾಗೂ ಅಣ್ಣಪ್ಪ ಪಂಜುರ್ಲಿ ಮತ್ತು ಉಪ ದೈವಗಳ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವವು ಜ.29 ರಿಂದ ಜ.31 ರ ವರೆಗೆ ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಜ.18 ರಂದು ದೇವರ ಝರಿಯಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ದೇವರ ಝರಿ ಪವಿತ್ರ ಕ್ಷೇತ್ರ. ಜನರಿಗೆ ಸ್ವಲ್ಪ ಅನುಕೂಲತೆ ಬಂದಾಗ ದೇವರು ತಾನಿರುವುದನ್ನು ತೋರಿಸಿಕೊಡುತ್ತೇನೆ. ಅದರಂತೆ ಇಲ್ಲೂ ದೇವರೇ ನಿಮ್ಮಿಂದ ಈ ಕೆಲಸ ಮಾಡಿಸುತಿದ್ದಾನೆ ಎಂದು ಭಾವಿಸುತ್ತೇನೆ ಎಂದರು. ಈ ಸಂದರ್ಭ ಆಡಳಿತ ಸಮಿತಿಯ ಗೌರವಾಧ್ಯಕ್ಷ ವೆಂಕಪ್ಪ ಗೌಡ ಹೆದ್ದಾರಿ, ಆಡಳಿತ ಸಮಿತಿಯ ಅಧ್ಯಕ್ಷ ಶ್ರೀ ಬಾಲಕೃಷ್ಣ ಮಾಡ ಬಾಗಿಲು, ಕಾರ್ಯದರ್ಶಿ ತಿಮ್ಮಪ್ಪ ಕಡ್ಯ, ಕೋಶಾಧಿಕಾರಿ ಕಿಶೋರ್ ಕುಮಾರ್ ಅಂಬೆಕಲ್ಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಮಾಡಬಾಗಿಲು, ಕಾರ್ಯದರ್ಶಿ ವಿಜಯಕುಮಾರ ಪರಮಲೆ, ಕೋಶಾಧಿಕಾರಿ ಭವ್ಯ ರಾಮಚಂದ್ರ ಪರಮಲೆ, ಆಡಳಿತ ಸಮಿತಿಯ ಉಪಾಧ್ಯಕ್ಷರುಗಳಾದ ಹರಿಣಿ ನರೇಂದ್ರ ಮುಂಡೋಡಿ, ಮೋಹನ ಗೌಡ ನೂಜೇಲು ಉಪಸ್ಥಿತರಿದ್ದರು . ಅಲ್ಲದೆ ಜೀರ್ಣೋದ್ಧಾರ ಸಮಿತಿಯ ಸೀತಾರಾಮ ಹೆದ್ದಾರಿ, ಧನಂಜಯ ಪಟ್ರುಕೋಡಿ, ಕಮಲ ರಾಮ್ದಾಸ್ ಮೋಂಟಡ್ಕ, ರಮೇಶ್ ಕೋಡ್ತುಗುಳಿ, ಶಿವಪ್ರಸಾದ್ ಹೆದ್ದಾರಿ, ಪುರುಷೋತ್ತಮ ಹೊಸೊಕ್ಲು, ಬಾಲಕಿ ಮಾಡ ಬಾಗಿಲು, ದೇವಕಿ ಹೆದ್ದಾರಿ ಪುಟ್ಟಕ್ಕ ಪರಮಲೆ, ಮೀನಾಕ್ಷಿ ಅರ್ಬಡ್ಕ, ಚಂದ್ರಶೇಖರ ನಾಯ್ಕ ಕುಂಬಾರಕೇರಿ, ಪ್ರದೀಪ್ ಕುತ್ಯಾಳ, ಚಂದ್ರಶೇಖರ ಎ, ತೇಜಮ್ಮ ಪರಮಲೆ, ರುಕ್ಮಯ ಹೆದ್ದಾರಿ, ಜಲಜಾಕ್ಷಿ ಹೆದ್ದಾರಿ, ಜಯಲಕ್ಷ್ಮಿ ಮುಂಡೋಡಿ, ಲಕ್ಷ್ಮಿ ಕುಂಬಾರಕೇರಿ, ರತ್ನಾವತಿ ಕುಂಬಾರಕೇರಿ, ಸೀತಮ್ಮ ಅಂಬೆಕಲ್ಲು, ಸೆಲ್ವಕುಮಾರ ಕುಂಬಾರಕೇರಿ, ಅಶೋಕ ಹೆದ್ದಾರಿ, ಧರ್ಮಾವತಿ ಹೆದ್ದಾರಿ, ಪ್ರಕಾಶ್ ಮುಂಡೋಡಿ, ಭಾಸ್ಕರ ಕೊತ್ಯಡ್ಕ, ಲೋಕಯ್ಯ ಕೊತ್ಯಡ್ಕ, ವೇದಾವತಿ ಮಾಡ ಬಾಗಿಲು, ಮಹಾದೇವಿ ಕಟೂರು, ಗಂಗಾತಿಲಕ ಅಂಬೆಕಲ್ಲು, ಬಾಲಕೃಷ್ಣ ಅಂಬೆಕಲ್ಲು, ಪೂರ್ವಕ್ಕ ಕುಂಬಾರಕೇರಿ, ರೂಪಲತಾ ಕೆ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.