ಕುಕ್ಕುಜಡ್ಕ: ಶ್ರೀ ಮಹಾವಿಷ್ಣು ಅಟೋ ರಿಕ್ಷ ಚಾಲಕ ಮಾಲಕ ಸಂಘಕ್ಕೆ ಅತ್ಯುತ್ತಮ ಸಂಘಟನಾ ಪ್ರಶಸ್ತಿ

Advt_Headding_Middle
Advt_Headding_Middle

 

ಮಂಗಳೂರು ಕೆಮಿಕಲ್ಸ್ & ಫರ್ಟಿಲೈಸರ್ಸ್ ಲಿ., ಕೆ.ಎಸ್. ಹೆಗ್ಡೆ ಚಾರಿಟಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಹಾಗೂ ಗರುಡ ಯುವಕ ಮಂಡಲ ಚೊಕ್ಕಾಡಿ ಇದರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಮತ್ತು ಹೃದಯ ತಪಾಸಣಾ ಶಿಬಿರ ಮತ್ತು ಮಣ್ಣಿನ ಪೋಷಕಾಂಶಗಳ ಪರೀಕ್ಷೆ ಮತ್ತು ಮಾಹಿತಿ ಕಾರ್ಯಕ್ರಮ ಜ. 12 ರಂದು ಕುಕ್ಕುಜಡ್ಕದ ದ.ಕ.ಜಿ.ಪ.ಹಿ.ಪ್ರಾ. ಶಾಲೆಯಲ್ಲಿ ನಡೆದಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಸ್. ಅಂಗಾರರು ಶ್ರೀ ಮಹಾವಿಷ್ಣು ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಪದಾಧಿಕಾರಿಗಳಿಗೆ ಗ್ರಾಮದ ಅತ್ಯುತ್ತಮ ಸಂಘಟನಾ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಸಂಘದ ಅಧ್ಯಕ್ಷ ಕೆ. ಶ್ರೀನಿವಾಸ ಗೌಡ, ಉಪಾಧ್ಯಕ್ಷ ಸತೀಶ್ ಪಿಲಿಕಜೆ, ಕಾರ್ಯದರ್ಶಿ ಸುರೇಶ್, ಖಜಾಂಜಿ ನಾಗೇಶ್ ಪೂಜಾರಿ, ಸದಸ್ಯರುಗಳಾದ ಶಿವರಾಜ್ ಕೆ.ಆರ್, ವಿಜಯಕುಮಾರ್ ಪೈಲೂರು, ಸಂದೀಪ್ ಅಮೆಬೈಲು, ಅಶೋಕ, ಹರೀಶ್ ನೆಕ್ರಾಜೆ, ಹರೀಶ್ ಕೊರತ್ಯಡ್ಕ ಪ್ರಶಸ್ತಿಯನ್ನು ಸ್ವೀಕರಿಸಿದರು. ಊರಿನಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಶ್ರಮದಾನ, ಅಶಕ್ತರಿಗೆ ಧನ ಸಹಾಯ, ಅನಾರೋಗ್ಯ ವ್ಯಕ್ತಿಗಳಿಗೆ ತುರ್ತು ಸೇವೆಗಾಗಿ ಉಚಿತ ಸಾಗಾಟ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳಲ್ಲಿ ಶ್ರೀ ಮಹಾವಿಷ್ಣು ಅಟೋ ಚಾಲಕ ಮಾಲಕ ಸಂಘದ ಸದಸ್ಯರು ತಮ್ಮನ್ನು ತೊಡಗಿಸಿಕೊಳ್ಳುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸೀತಾ ಹೆಚ್. ವಹಿಸಿದ್ದರು. ಎಂ.ಸಿ.ಎಫ್. ಮಂಗಳೂರು ಇದರ ಡೆಪ್ಯುಟಿ ಜನರಲ್ ಮ್ಯಾನೇಜರ್ ಡಾ. ಆದರ್ಶ, ಚೀಫ್ ಜನರಲ್ ಮ್ಯಾನೇಜರ್ ಗಿರೀಶ್, ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ನೇತ್ರ ತಜ್ಞ ಡಾ. ವಿಜಯ ಪೈ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸವಿತಾ ಪಡ್ಪು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಘವ ಕೆ, ಗರುಡ ಯುವಕ ಮಂಡಲ ಚೊಕ್ಕಾಡಿ ಇದರ ಅಧ್ಯಕ್ಷ ಸತೀಶ್ ಪಿಲಿಕಜೆ, ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಉಷಲತಾ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.