ಎಲಿಮಲೆ ಕನ್ನಡ ನುಡಿ ಜಾತ್ರೆಯನ್ನು ಯಶಸ್ವಿಗೊಳಿಸೋಣ ಬನ್ನಿ

Advt_Headding_Middle
Advt_Headding_Middle
Advt_Headding_Middle

ಬಂಟಮಲೆಯ ಪ್ರಕೃತಿ ರಮಣೀಯವಾದ ಪ್ರದೇಶವಾದ ಎಲಿಮಲೆಯಲ್ಲಿ ಸುಳ್ಯ ತಾಲೂಕು ಮಟ್ಟದ 24 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲಿಮಲೆ ಪೇಟೆಯು ಅಲಂಕಾರದಿಂದ ಸಜ್ಜುಗೊಂಡಿದೆ. ಸಮ್ಮೇಳನವು ಹಿರಿಯ ವಿಧ್ಯಾರ್ಥಿ ಸಂಘ ಸರಕಾರಿ ಪ್ರೌಢ ಶಾಲೆ ಎಲಿಮಲೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯುತ್ತಿದ್ದು, ಎಲಿಮಲೆ ಪೇಟೆಯಿಂದ ಒಂದು ಕಿ.ಮೀ ದೂರದಲ್ಲಿರವ ಶಾಲೆ, ದಾರಿಯುದ್ದಕ್ಕೂ ಕನ್ನಡದ ಕಂಪನ್ನು ಬೀರುವ ತೋರಣಗಳು, ಕನ್ನಡದ ಭಾವುಟಗಳು, ವಿವಿಧ ಕಲೆಗಳ ಆಕೃತಿಗಳಿಂದ ತುಂಬಿ ಕರುನಾಡ ಕಲೆಯನ್ನು ಬೆಳಗಿಸುತ್ತಿದೆ.

ಭವ್ಯ ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ “ರಾಜಪ್ರಮುಖ”ರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.

ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ ೧, ೧೯೫೬ ರಂದು ರಾಜ್ಯ ಪುನಸ್ಸಂಘಟನಾ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದರಾಬಾದ್, ಮತ್ತು ಬಾಂಬೆ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ “ವಿಶಾಲ ಮೈಸೂರು” ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವೆಂಬರ್ ೧, ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.

ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲ್ಪಡುವ ಭಾಷೆ ಕನ್ನಡ. ಕನ್ನಡ ಭಾಷೆ ದ್ರಾವಿಡ ಭಾಷಾ ಬಳಗಕ್ಕೆ ಸೇರುತ್ತದೆ. ಆಧುನಿಕ ಭಾರತದಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ ಎರಡನೇ ಅತಿ ಹಳೆಯ ಭಾಷೆಯೂ ಹೌದು . ಕನ್ನಡ ಸಾಹಿತ್ಯ ಭಾರತದಲ್ಲಿ ಮೂರನೇ ಅತಿ ಹಳೆಯ ಸಾಹಿತ್ಯದ ಸಂಪ್ರದಾಯವಾಗಿದೆ.

ಕನ್ನಡ ಬರವಣಿಗೆಯ ಪ್ರಪ್ರಥಮ ಉದಾಹರಣೆ ದೊರಕಿರುವುದು ಹಲ್ಮಿಡಿ ಶಾಸನದಲ್ಲಿ (ಕ್ರಿ.ಶ. ೪೫೦). ಪ್ರಸಿದ್ಧವಾದ ಬಾದಾಮಿ ಶಾಸನಗಳು ಪುರಾತನ ಕನ್ನಡ ಬರವಣಿಗೆಯ ಮತ್ತಷ್ಟು ಉದಾಹರಣೆಗಳನ್ನು ನೀಡುತ್ತವೆ. ಪ್ರಥಮ ಕನ್ನಡ ಪುಸ್ತಕ 6 ನೇ ಶತಮಾನದ ಅಮೋಘವರ್ಷ ನೃಪತುಂಗನ ಕವಿರಾಜಮಾರ್ಗ. ಈ ಪುಸ್ತಕ ಕನ್ನಡ ಕಾವ್ಯ, ಕನ್ನಡ ನಾಡು, ಮತ್ತು ಕನ್ನಡಿಗರ ಬಗ್ಗೆ ಬರೆಯಲ್ಪಟ್ಟ ಒಟ್ಟಾರೆ ಸಾರಾಂಶವೆನ್ನಬಹುದು.

ಹೀಗೇ ಮುಂದುವರೆದು ಬ್ರಿಟಿಷ್ ಆಳ್ವಿಕೆಯ ಪ್ರಾರಂಬಿಕ ಹಂತಗಳಲ್ಲಿ ಹೆಚ್ಚು ಬೆಳಕು ಕಾಣದೇ ಇದ್ದ ಕನ್ನಡ ಸಾಹಿತ್ಯ 16 ನೇ ಶತಮಾನ ಕೊನೆಗೆ ಹಾಗೂ ಇಪ್ಪತ್ತನೇ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆೆಗೆ ಕಾರಣವಾಯಿತು. ಈ ಹಂತದಲ್ಲಿ ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಮೊದಲಾದ ಶ್ರೇಷ್ಠ ಲೇಖಕರು ಕವಿಗಳು ಬೆಳಕಿಗೆ ಬಂದರು. ಕುವೆಂಪು ಅವರು ತನ್ನ ಒಬ್ಬ ಬ್ರಿಚಷ್ ಮೂಲದ ಶಿಕ್ಷಕರಿಂದ ಕನ್ನಡದಲ್ಲಿ ಬರೆಯುದರ ಮಹತ್ವವನ್ನು ಕಂಡುಕೊಂಡು ಮುಂದೆ ರಾಷ್ಟ್ರ ಕವಿ ಬಿರುದಿಗೆ ಪಾತ್ರರಾದರು.
ಅವರ ಪ್ರಕೃತಿ ಪ್ರೇಮ, ಮಾನವನ ಉನ್ನತಿಯಲ್ಲಿ ನಂಬಿಕೆ ಕಾಣುವ ಅವರ ಮನಸ್ಸು ಅವರನ್ನು ಕನ್ನಡದ ಉಚ್ಚ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿವೆ.

ಹೀಗೆ ಮುಂದುವರೆದು ಕನ್ನಡದ ಕವಿಗಳು /ಲೇಖಕರುಗಳಾದ ದಾರಾ ಬೇಂದ್ರೆ, ಕೆಎಸ್ ನರಸಿಂಹಸ್ವಾಮಿ, ಗೋಪೀಲಕೃಷ್ಣ ಅಡಿಗ, ಪ್ರೊ.ನಿಸಾರ್ ಅಹ್ಮದ್, ಚೆನ್ನವೀರ ಕಣವಿ, ಚಂದ್ರಶೇಖರ್ ಕಂಬಾರ, ಡಿವಿಜಿ ಮೊದಲಾದವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಅಪಾರವಾದವು.

ಅವರ ಕಾಲಗಟ್ಟದ ನಂತರ ಆಧುನಿಕ ಯುಗದಲ್ಲಿ ಜೀವಿಸುತ್ತಿರುವ ಕರ್ನಾಟಕದ ಕನ್ನಡಿಗರು ಕನ್ನಡ ಭಾಷೆ, ಸಾಹಿತ್ಯ ಇವೆಲ್ಲವನ್ನೂ ಕಾಪಾಡಿಕೊಂಡು ಬಂದಿದ್ದಾರೆ. ಇಂದು ಕನ್ನಡದ ಕಂಪು ಕನಾಟಕದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಹರಡಿದೆ. ವಿವಿದ ದೇಶಗಳಲ್ಲಿ ಹುದ್ದೆ ವ್ಯಾಪಾರವನ್ನು ಮಾಡುತ್ತಿರುವ ಸಾವಿರಾರು ಕನ್ನಡಿಗರು ಕನ್ನಡದ ಕಂಪನ್ನು ಉಳಿಸಿಕೊಂಡು ಬಂದಿದ್ದಾರೆ, ವಿದೇಶದಲ್ಲಿದ್ದು ಕನ್ನಡಿಗನಾಗಿ ಕರ್ನಾಟಕದವರೆಡೆಯಲ್ಲಿ ಅವನಿಗಿರುವ ಗೌರವ ಅಪಾರವಾದದ್ದು, ಭವ್ಯ ಭಾರತದಲ್ಲಿ ಕನ್ನಡಿಗರ ಕೊಡುಗೆಗಳು, ವಿಶ್ವಮಟ್ಚದಲ್ಲೇ ಗುರುತಿಸಿಕೊಂಡಿದೆ.

ಮನೆ ಮಂದಿರ ಮಸೀದಿಗಳು, ವಿಜ್ಞಾನ ವೈಧ್ಯಕೀಯ ಸಾಮಾಜಿಕ ಪ್ರವಾಸಿ ಕ್ಷೇತ್ರಗಳಲ್ಲಿಯೂ ಕನ್ನಡ ಭಾಷೆಯನ್ನು ಪ್ರಮುಖವಾಗಿಟ್ಟುಕೊಂಡು ಬಳಸುತ್ತಿದ್ದಾರೆ.

ಇದರ ಒಂದು ಭಾಗವಾದ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇಧರ ಅದೀನದಲ್ಲಿ ಸರಕಾರಿ ಪ್ರೌಢಶಾಲೆ ಎಲಿಮಲೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅತೀ ವಿಜೃಂಭಣೆಯಿಂದ ಸುಳ್ಯ ತಾಲೂಕು ಮಟ್ಟದ 24 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಎಲಿಮಲೆ ಪ್ರೌಢಶಾಲಾ ಮೈದಾನದಲ್ಲಿ ಜ.19 ನಾಳೆ ನಡೆಯಲಿದೆ. ಹಲವಾರು ಗಣ್ಯ ವೆಕ್ತಿಗಳು, ಧಾರ್ಮಿಕ ಸಾಮಾಜಿಕ ಮುಖಂಡರು, ಕವಿಗಳು ವೇದಿಕೆಯನ್ನು ಧನ್ಯಗೊಳಿಸಲಿದ್ದಾರೆ……
ವಿಜಯಗೊಳಿಸಿ…..

✍ಕೆಎಸ್ಎಮ್ ಎಲಿಮಲೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.