ಅಮರ ಸಂಘಟನಾ ಸಮಿತಿ ಅಮರ ಮುಡ್ನೂರು-ಪಡ್ನೂರು ವತಿಯಿಂದ ಪ್ಲಾಸ್ಟಿಕ್ ಸಂಗ್ರಹಣೆಗೆ ವಿಭಿನ್ನ ಪ್ರಯತ್ನ

Advt_Headding_Middle
Advt_Headding_Middle

ಪ್ಲಾಸ್ಟಿಕ್ ಬಳಕೆ ಹಾಗೂ ಅದರ ದುಷ್ಪರಿಣಾಮದ ಜ. 18 ರಂದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಒಂದು ಕೆಜಿ ಪ್ಲಾಸ್ಟಿಕ್ ನೀಡಿದಲ್ಲಿ ಒಂದು ಕೆಜಿ ಅಕ್ಕಿ ವಿತರಣೆ ಎಂಬ ವಿಭಿನ್ನವಾದ ಪ್ರಯತ್ನ ಅಮರ ಸಂಘಟನಾ ಸಮಿತಿ ಅಮರಮುಡ್ನೂರು/ ಪಡ್ನೂರು ಇದರ ಆಶ್ರಯದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಮತ್ತು ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಹಾಗು ಗ್ರಾಮ ಪಂಚಾಯತ್ ಬಾಳಿಲ ಇವರ ಸಹಕಾರದೊಂದಿಗೆ ವಿದ್ಯಾಬೋಧಿನಿ ಪ್ರೌಢಶಾಲೆ ಶಾಲೆ ಬಾಳಿಲದಲ್ಲಿ ನಡೆಯಿತು.

ಬಾಳಿಲ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಭಾಗವಸಿದ್ದ ಈ ಒಂದು ಕಾರ್ಯಕ್ರಮದಲ್ಲಿ ಸುಮಾರು ೧೪೦ ಕೆಜಿ ಪ್ಲಾಸ್ಟಿಕ್ ಸಂಗ್ರಹವಾಗಿ ೧೬೦ ಕೆಜಿಯಷ್ಟು ಅಕ್ಕಿಯನ್ನು ವಿತರಿಸಲಾಯಿತು. ಸಂಗ್ರಹಿಸಿದ ಅಕ್ಕಿಯನ್ನು ಸಂಘದ ಸದಸ್ಯರೇ ಬೇರ್ಪಡಿಸಿ ಅದನ್ನು ಪಂಚಾಯತ್ ಅವರಿಗೆ ಒಪ್ಪಿಸಲಾಯಿತು.


ಸಭಾಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಅಮರ ಸಂಘಟನಾ ಸಮಿತಿ ಇದರ ಅಧ್ಯಕ್ಷರಾದ ಶಿವಪ್ರಸಾದ್ ದೊಡ್ಡಿಹಿತ್ಲು ಅವರು ವಹಿಸಿದ್ದರು. ಬಾಳಿಲ ಪಂಚಾಯತ್ ಸದಸ್ಯರಾದ ಯು. ರಾಧಾಕೃಷ್ಣ ರಾವ್ ಅವರು ಪಂಚಾಯತ್ ವತಿಂದ ಪ್ಲಾಸ್ಟಿಕ್ ನಿರ್ಮೂಲನೆಗೆ ಕೈಗೊಂಡಿರುವ ಕ್ರಮ ಹಾಗು ಸಾರ್ವಜನಿಕರು ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಯಾವ ರೀತಿ ಸಹಕರಿಸಬೇಕು ಎಂದು ಮಾಹಿತಿ ನೀಡಿದರು. ವಿಜ್ಞಾನ ಶಿಕ್ಷಕ ಮೋಹನ್ ಕುಮಾರ್ ಮಾತನಾಡಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದೃಷ್ಪರಿಣಾಮ ಹಾಗು ಅದರ ಬಳಕೆಯನ್ನು ಯಾವ ರೀತಿ ಕಡಿಮೆ ಮಾಡಬಹುದು ಎಂದು ಮಾಹಿತಿ ನೀಡಿದರು. ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯ ಗುರುಗಳಾದ ಶಿವರಾಮ ಶಾಸ್ತ್ರಿ, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ವೈ. ಬಿ ಸುಬ್ಬಯ್ಯ ಹಾಗು ಪಂಚಾಯತ್ ಸದಸ್ಯರಾದ ಶ್ರೀಮತಿ ವಾರಿಜರವರು ಉಪಸ್ಥಿತರಿದ್ದರು.

ಅಮರ ಸಂಘಟನೆಯ ಗೌರವಾಧ್ಯಕ್ಷ ರಜನಿಕಾಂತ್ ಉಮ್ಮಡ್ಕ ಪ್ರಾಸ್ತಾವಿಕ ಮಾತನಾಡಿ, ಮಿಥುನ್ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ಅಮರ ಸಂಘಟನೆಯ ಸದಸ್ಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.