Breaking News

ಪಂಜ: ಚೈತನ್ಯ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಉಪನ್ಯಾಸ ಕಾರ್ಯಕ್ರಮ

Advt_Headding_Middle
Advt_Headding_Middle


ಜೆಸಿಐ ಪಂಜ ಪಂಚಶ್ರೀ ಪ್ರಾಂತ್ಯ ಜಿ ವಲಯ ಜೇಸಿಐ ಭಾರತ ಜೇಸೀರೆಟ್ ಮತ್ತು ಯುವ ಜೇಸಿ ವಿಭಾಗ ಇದರ ಆಶ್ರಯದಲ್ಲಿ  ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಚೈತನ್ಯ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಉಪನ್ಯಾಸ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪಂಜದಲ್ಲಿ ನಡೆಯಿತು. ಪ್ರಾಂಶುಪಾಲ  ಚಲಪತಿಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಿಂತಿಕಲ್ಲು ಕೆ.ಎಸ್.ಗೌಡ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಸದಾನಂದ ಕೊವೆಂಜ ಉಪನ್ಯಾಸಗೈದು, ವಿವೇಕಾನಂದರ ಜನ್ಮದಿನ ಮತ್ತು ನಡೆದುಬಂದ ದಾರಿಯನ್ನು ಮಕ್ಕಳಿಗೆ ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಸುಳ್ಯ ಎಪಿಎಂಸಿ ನಿರ್ದೇಶಕ ಮೋನಪ್ಪ ಗೌಡ ಬೊಳ್ಳಾಜೆ ಭಾಗವಹಿಸಿದ್ದರು. ವಲಯ 15 ರ ವಲಯಾಧಿಕಾರಿ ಜೇಸಿ ವಾಸುದೇವ ಮೇಲ್ಪಾಡಿ, ಪಂಜ ಪಂಚಶ್ರೀಯ ಅಧ್ಯಕ್ಷ ಜೇಸಿ ನಾಗಮಣಿ ಕೆದಿಲ, ಕಾರ್ಯಕ್ರಮದ ನಿರ್ದೇಶಕ ಜೇಸಿ ಪ್ರವೀಣ್  ಕಾಯರ, ಶಿವಪ್ರಸಾದ್ ಹಾಲೆಮಜಲು, ಪೂರ್ವಾಧ್ಯಕ್ಷ ಸವಿತಾರ ಮುಡೂರು, ಸೋಮಶೇಖರ ನೇರಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜೇಸಿ ಕಾರ್ಯದರ್ಶಿ ದೇವಿಪ್ರಸಾದ್ ಚಿಕ್ಮುಳಿ ಧನ್ಯವಾದಗೈದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.