ಪಂಜ: ಜ.26 ರಿಂದ 27 ತನಕ ದೈವಗಳ ಮೂಲ ಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Advt_Headding_Middle
Advt_Headding_Middle

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಶ್ರೀ ಉಳ್ಳಾಕುಲು ಮತ್ತು ಶ್ರೀ ಕಾಜುಕುಜುಂಬ ದೈವದ ಮೂಲ ಸ್ಥಾನ ಗರಡಿ ಬೈಲಿಲ್ಲಿ ದೈವಸ್ಥಾನದ ಜೀರ್ಣೋದ್ಧಾರದ ಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜ.26 ರಿಂದ ಜ. 27 ತನಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರುಗಲಿದೆ.

ಜ.26 ರಂದು ರಾತ್ರಿ ದೇವತಾ ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ಆಚಾರ್ಯವರಣೆ, ಸ್ವಸ್ತೀ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ,ನೂತನ ಬಿಂಬಜಲಾಧಿವಾಸ, ಪ್ರಾಕಾರ ಬಲಿ, ಪ್ರಸಾದ ವಿತರಣೆ ಜರುಗಲಿದೆ.ಜ.27 ರಂದು ಮುಂಜಾನೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಬ್ರಹ್ಮಕಲಶ ಪೂಜೆ, ಆಶ್ಲೇಷಾ ಬಲಿ, ಅಷ್ಟಪಟು ಆರಾಧನೆ.ಪೂ.9.5೦ ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ನಾಗ ಶಿಲಾ ಪ್ರತಿಷ್ಠೆ, ಶ್ರೀ ಕಾಜುಕುಜುಂಬ ಮತ್ತು ಉಳ್ಳಾಕುಲು ದೈವಗಳ ಪ್ರತಿಷ್ಠೆ ,ಬ್ರಹ್ಮಕಲಶಾಭಿಷೇಕ,ತಂಬಿಲ ಸೇವೆ,ಮಂಗಳಾತಿ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ಜರುಗಲಿದೆ.ಫೆ.7 ರಂದು ಸಂಜೆ ದೈವದ ಮೂಲ ಸ್ಥಾದಲ್ಲಿ ಧ್ವಜಾರೋಹಣ ಗೊಂಡು ಶ್ರೀ ಕಾಜುಕುಜುಂಬ ದೈವದ ನೇಮ ಜರುಗಲಿದೆ.ಫೆ.8 ರಂದು ಮುಂಜಾನೆ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ ಸೇವೆ. ಶ್ರೀ ಉಳ್ಳಾಕುಲು ದೈವದ ಸಿರಿಮುಡಿ ನೇಮೋತ್ಸವ ನಡೆದು, ಧ್ವಜಾವರೋಹಣ, ಅನ್ನಸಂತರ್ಪಣೆ ಜರುಗಲಿದೆ.

ಪ್ರಾಚೀನ ಕಾಲದ ದೈವಸ್ಥಾನ:

ಪಂಜ ದೇವಳದಿಂದ ಸುಮಾರು 1 ಕಿ.ಮೀ.ದೂರದಲ್ಲಿ ಗರಡಿ ಬೈಲು ಎಂಬಲ್ಲಿ ಪ್ರಕೃತಿ ಸೌಂದರ್ಯ ರಮಣೀಯ ನಡುವೆ ಶ್ರೀ ಉಳ್ಳಾಕುಲು ಮತ್ತು ಶ್ರೀ ಕಾಜುಕುಜುಂಬ ದೈವದ ಮೂಲ ಸ್ಥಾನವಿದೆ. ಬಹಳ ಪ್ರಾಚೀನ ಕಾಲದಿಂದಲೇ ದೈವಗಳ ಆರಾಧನೆ ನಡೆಯುತ್ತಿದ್ದುದಕ್ಕೆ ಅನೇಕ ಸಾಕ್ಷಿ, ಕುರುಹುಗಳಿವೆ. ಕೆಂಪು ಕಲ್ಲಿನಿಂದ ನಿರ್ಮಿಸಲಾದ ಶ್ರೀ ಉಳ್ಳಾಕುಲು ಮತ್ತು ಶ್ರೀ ಕಾಜುಕುಜುಂಬ ದೈವಸ್ಥಾನದ ಕರುಹುUಳು ಉಳಿದಿತ್ತು. ಶಿಲೆ ಕಲ್ಲಿನಂದ ಕೆತ್ತನೆ ಗೊಂಡಿರುವ ಧ್ವಜದ ಕಟ್ಟೆ, ಕಂಚಿ ಕಲ್ಲು, ಬಲಿ ಕಲ್ಲು ಇದೆ. ಆದರೆ ಅನೇಕ ವರುಷಗಳಿಂದ ಇಲ್ಲಿನ ದೈವಸ್ಥಾನ,ನಾಗನ ಕಟ್ಟೆ ಸಂಪೂರ್ಣ ಶಿಥಿಲ ಗೊಂಡು ನೆಲಗಚ್ಚಿತ್ತು.ಇದೀಗ ಮತ್ತೆ ವಿಶೇಷ ಸುಂದರವಾದ ಮಾಡದ ದೈವಸ್ಥಾನ,ನಾಗನ ಕಟ್ಟೆ ಜೀರ್ಣೋದ್ಧಾರ ಗೊಂಡು ವೈಭವದ ದಿನ ಮರುಕಳಿಸಿದೆ. ದೈವ್ಯಜ್ಞ ಸತ್ಯನಾರಾಯಣ ಭಟ್ ಅವರಿಂದ ಪ್ರಶ್ನಾ ಚಿಂತನೆಗಳು ನಡೆದು. ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯಕ್ರಮಗಳು ಜರುಗಿದ್ದು,ವಾಸ್ತು ಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ರವರು ನಿರ್ಮಾಣದ ರೂಪುರೇಷೆಗಳನ್ನು ರಚಿಸಿ. ದೇವಳದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ರವರ ನೇತೃತ್ವದಲ್ಲಿ ಪುನ:ನಿರ್ಮಾಣ ಸಮಿತಿ ರಚಿಸಿ ಗೌರವಾಧ್ಯಕ್ಷರಾಗಿ ಆನಂದ ಗೌಡ ಕಂಬಳ, ಅಧ್ಯಕ್ಷರಾಗಿ ಮಹೇಶ್ ಕುಮಾರ್ ಕರಿಕ್ಕಳ, ಕಾರ್‍ಯದರ್ಶಿಯಾಗಿ ಪವಿತ್ರ ರಾಜೇಶ್ ಕುದ್ವ-ಮಲ್ಲೆಟ್ಟಿ, ಖಜಾಂಜಿಯಾಗಿ ನಿವೃತ್ತ ಶಿಕ್ಷಕಿ ಪದ್ಮಾವತಿ ಹಾಗೂ ಅನೇಕರು ಉಪಾಧ್ಯಕ್ಷರಾಗಿ ಆಯ್ಕೆಗೊಂಡು ಸೇವೆ ಗೈಯುತ್ತಿದ್ದಾರೆ,ಸೀಮೆಯ ಭಕ್ತರ ತನು ಮನ ಧನದಿಂದ ಸೇವೆ ನೀಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.