HomePage_Banner
HomePage_Banner

ಕೆ.ವಿ.ಜಿ. ದಂತ ಮಹಾವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆಯ ಕಾರ್ಯಗಾರ

ಬಾಯಿ, ದವಡೆ ಹಾಗೂ ಮುಖದ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ಅಡ್ವಾನ್ಸ್ಡ್ಸರ್ಜಿಕಲ್ಪ್ರೊಸೀಜರ್ ಇನ್‌ಇಂಪ್ಲಾಂಟಾಲಜಿ ಶಸ್ತ್ರಚಿಕಿತ್ಸೆಯ ಕಾರ್ಯಗಾರವನ್ನು ಜ. ೧೩ ರಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತುಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಬಾಯಿ ದವಡೆ ಹಾಗೂ ಮುಖದ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ| ರಾಮರಾಜ್ ಪಿ.ಎನ್. ಸ್ವಾಗತಿಸಿ, ಕಾರ್ಯಕ್ರಮದ ಬಗೆಗಿನ ಮಾಹಿತಿಗಳನ್ನು ನೀಡಿದರು.

ಅತಿಥಿ ಉಪನ್ಯಾಸಕರಾದ ಡಾ|| ದೀಪಕ್‌ಎಸ್. ಪ್ರಾಂಶುಪಾಲರಾದ ಡಾ|| ಮೋಕ್ಷಾ ನಾಯಕ್, ಡಾ|| ಶರತ್‌ಕುಮಾರ ಶೆಟ್ಟಿ, ಸ್ನಾತಕೋತ್ತರ ಪದವಿ ಅಧ್ಯಯನ ವಿಭಾಗ ಪ್ರಾಧ್ಯಾಪಕ ಡಾ|| ಪ್ರಸನ್ನಕುಮಾರ್ ಡಿ. ಉಪಸ್ಥಿತರಿದ್ದರು.

ಡಾ| ಮಹಾಬಲೇಶ್ವರ ಸಿ.ಎಚ್.ರವರು ಸಂಪನ್ಮೂಲ ವ್ಯಕ್ತಿಗಳಾದ ಡಾ|| ದೀಪಕ್‌ಎಸ್. ರವರನ್ನು ಪರಿಚಯಿಸಿದರು.

ಪ್ರಾಂಶುಪಾಲೆ ಡಾ|| ಮೋಕ್ಷಾ ನಾಯಕ್, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ|| ದೀಪಕ್‌ಎಸ್‌ರವರು, ಅಡ್ವಾನ್ಸ್ಡ್ಸರ್ಜಿಕಲ್ಪ್ರೊಸೀಜರ್‌ಇನ್‌ಇಂಪ್ಲಾಂಟಾಲಜಿ [ಇಂಪ್ಲಾಂಟ್ ಅಳವಡಿಕೆಯ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳು] ಬಗ್ಗೆ ಉಪನ್ಯಾಸವನ್ನು ನೀಡಿದರು. ಕೊನೆಯದಾಗಿಡಾ|| ಪ್ರಸನ್ನಕುಮಾರ್, ಪ್ರಾಧ್ಯಾಪಕರು, ಬಾಯಿ, ದವಡೆ ಹಾಗೂ ಮುಖದ ಶಸ್ತ್ರಚಿಕಿತ್ಸಾ ವಿಭಾಗಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತುಆಸ್ಪತ್ರೆ, ಇವರು ವಂದನಾರ್ಪಣೆಯನ್ನು ಸಲ್ಲಿಸಿದರು.

ನಂತರ ಕೆ.ವಿ.ಜಿದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಸುಮಾರು ೬ ಗಂಟೆಗಳ ಕಾಲ ಸತತವಾಗಿ ಇಂಪ್ಲಾಂಟ್ ಅಳವಡಿಕೆಯ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳ [ಅಡ್ವಾನ್ಸ್ಡ್ಸರ್ಜಿಕಲ್ಪ್ರೊಸೀಜರ್‌ಇನ್‌ಇಂಪ್ಲಾಂಟಾಲಜಿ] ವೀಕ್ಷಕ ವಿವರಣೆ ಮತ್ತು ನೇರ ಪ್ರಸಾರವನ್ನು ಮಾಡಲಾಯಿತು. ಸರಿ ಸುಮಾರು ೫೦ ವಿದ್ಯಾರ್ಥಿಗಳು [ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು] ಹಾಗೂ ಉಪನ್ಯಾಸಕರು ಈ ಕಾರ್ಯಕ್ರಮದ ಉಪಯೋಗವನ್ನು ಪಡೆದರು.

ಇಂಪ್ಲಾಂಟಾಲಜಿ ಎಂಬುದು ಕೃತಕ ದಂತ ಚಿಕಿತ್ಸೆಯ ಆಧುನಿಕ ಚಿಕಿತ್ಸಾ ಪದ್ಧತಿ. ಕೃತಕದಂತವನ್ನು ಅಳವಡಿಸಲು, ದವಡೆಯೊಳಗೆ ಇಂಪ್ಲಾಂಟನ್ನು ಅಳವಡಿಸಲಾಗುವುದು. ಒಂದೊಮ್ಮೆ ದೀರ್ಘಕಾಲದಿಂದ ಹಲ್ಲಿಲ್ಲದಿದ್ದಲ್ಲಿ ದವಡೆಯ ಎಲುಬು ಸವೆದು, ತೆಳುವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಂಪ್ಲಾಟ್ ಅಳವಡಿಸಲು ಉನ್ನತ ಮಟ್ಟದ ಕಿರು ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು. ಇಂತಹ ಚಿಕಿತ್ಸಾ ವಿಧಾನದ ಬಗ್ಗೆ ಈ ಕಾರ್ಯಗಾರದಲ್ಲಿ ಮಾಹಿತಿ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.