Breaking News

ಮುರುಳ್ಯ-ಎಣ್ಮೂರು ಸಹಕಾರಿ ಸಂಘ : 5 ಮಂದಿ ಅವಿರೋಧ – 7 ಸ್ಥಾನಕ್ಕೆ 9 ಮಂದಿ ಕಣದಲ್ಲಿ

Advt_Headding_Middle
Advt_Headding_Middle

 

ಮುರುಳ್ಯ – ಎಣ್ಮೂರು ಪ್ರಾ.ಕೃ. ಪ.ಸಹಕಾರ ಸಂಘದ 12  ಸ್ಥಾನಗಳಿಗೆ ಘೋಷಣೆ ಯಾಗಿರುವ ಚುನಾವಣೆಯಲ್ಲಿ 5 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 7 ಸ್ಥಾನಗಳಿಗೆ 9 ಮಂದಿ ಕಣದಲ್ಲಿರುವುದರಿಂದ ಜ.23 ರಂದು ಸಹಕಾರಿ ಸಂಘದ ವಠಾರದಲ್ಲಿ ಚುನಾವಣೆ ನಡೆಯಲಿದೆ.


ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ 5 ಮಂದಿ ಆಯ್ಕೆಯಾಗಬೇಕಿದ್ದು 6 ಮಂದಿ ಕಣದಲ್ಲಿದ್ದಾರೆ. ಸಹಕಾರ ಭಾರತಿ ಬೆಂಬಲಿತರಾದ ರಘುನಾಥ ರೈ ಕೆ.ಎನ್., ರಾಜಶೇಖರ ಎ, ವಸಂತ ಹೆಚ್., ವಸಂತ ಎನ್., ರೂಪರಾಜ ರೈ ಹಾಗೂ ಪಕ್ಷೇತರ ಅಭ್ಯರ್ಥಿ ಬಾಲಕೃಷ್ಣ ಗೌಡ ಎಂ ಕಣದಲ್ಲಿದ್ದಾರೆ.
ನಾಮಪತ್ರ ಸಲ್ಲಿಸಿದ ರಮೇಶ್ ಕೋಟೆ, ಪ್ರಮೋದ್ ಕುಮಾರ್ ಕೆ, ಮಾಯಿಲಪ್ಪ ಗೌಡ ಪಿ, ಸೀತಾರಾಮ ರೈ ಯು. ನಾಮಪತ್ರ ಹಿಂಪಡೆದುಕೊಂಡಿದ್ದಾರೆ.
ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿರುವ ಎರಡು ಸ್ಥಾನಗಳಿಗೆ ಮೂರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಪುರುಷೋತ್ತಮ ಆಚಾರ್ಯ ಮತ್ತು ಶೇಖರ ಸಾಲ್ಯಾನ್ ಹಾಗೂ ಪಕ್ಷೇತರ ಅಭ್ಯರ್ಥಿ ಕೃಷ್ಣ ಕುಮಾರ್ ಎ ಕಣದಲ್ಲಿದ್ದಾರೆ.
ಅವಿರೋಧ ಆಯ್ಕೆ:
ಮಹಿಳಾ ಮೀಸಲು ಕ್ಷೇತ್ರದಿಂದ ಇಬ್ಬರು ಆಯ್ಕೆಯಾಗಬೇಕಾಗಿದ್ದು, ಒಟ್ಟು ೪ ಮಂದಿ ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ನೇತ್ರಾವತಿ ಊರ್ಸಾಗು ಮನೆ ಮತ್ತು ಭಾರತಿ ಹುದೇರಿ ನಾಮಪತ್ರ ಹಿಂಪಡೆದುದರಿಂದ ಸಹಕಾರ ಭಾರತೀಯ ಕುಸುಮಾವತಿ ರೈ ಕೆ.ಜಿ. ಮತ್ತು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ನಳಿನಿ ಎಸ್. ರೈ ಊರುಸಾಗು ಅವಿರೋಧವಾಗಿ ಆಯ್ಕೆಯಾದರು.
ಪರಿಶಿಷ್ಟ ಪಂಗಡದ ವಿಭಾಗದಿಂದ ಒಬ್ಬರು ಆಯ್ಕೆಯಾಗಬೇಕಾಗಿದ್ದು, ಮೂರು ನಾಮಪತ್ರ ಸಲ್ಲಿಕೆಯಾಗಿತ್ತು.
ನಾಮಪತ್ರ ಸಲ್ಲಿಸಿದವರಲ್ಲಿ ಜಾನಕಿ ಶಾಂತಿನಗರ ಹಾಗೂ ಪೊಡಿಯ ದೇವಿನಗರ ನಾಮಪತ್ರ ಹಿಂಪಡೆದುದರಿಂದ ಭಾಗೀರಥಿ ಮುರುಳ್ಯ ಅವಿರೋಧ ಆಯ್ಕೆಯಾದರು.
ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ದಿನೇಶ ಪಜಿಂಬಿಲ ಹಾಗೂ ಸಾಲಗಾರರಲ್ಲದ ಕ್ಷೇತ್ರಕ್ಕೆ ದಿನೇಶ್ ಹೆಚ್ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ಸಲ್ಲಿಸಲು ಜ.15  ಕೊನೆಯ ದಿನವಾಗಿತ್ತು. ಜ.23ರಂದು ಚುನಾವಣೆ ನಡೆಯುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.