ಮಂಡೆಕೋಲು ಸಹಕಾರಿ ಸಂಘ : ಅವಿರೋಧ ಆಯ್ಕೆ

Advt_Headding_Middle
Advt_Headding_Middle

 

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ.

12 ನಿರ್ದೇಶಕ ಸ್ಥಾನಗಳಿಗೆ 14 ನಾಮಪತ್ರ ಸಲ್ಲಿಕೆ ಯಾಗಿತ್ತು.

ಇದರಲ್ಲಿ ಸಾಲಗಾರರ ಕ್ಷೇತ್ರದ ಸಾಮಾನ್ಯ ಸ್ಥಾನ ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರಕ್ಕೆ ಅಗತ್ಯವಿರುವಷ್ಟೆ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ೭ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಸಾಮಾನ್ಯ ಸಾಲಗಾರರ ೫ ಸ್ಥಾನಕ್ಕೆ ೭ ಮಂದಿ ಕಣದಲ್ಲಿದ್ದಾರೆ. ಸಾಮಾನ್ಯ ಸಾಲಗಾರರ ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಾಗಿ ರಾಮಕೃಷ್ಣ ರೈ ಪೇರಾಲುಗುತ್ತು, ಈಶ್ವರಚಂದ್ರ ಕೆ.ಆರ್., ಸುನಿಲ್ ಪಾತಿಕಲ್ಲು, ಭಾಸ್ಕರ ಮಿತ್ತಪೇರಾಲು, ಮತ್ತು ಪದ್ಮನಾಭ ಚೌಟಾಜೆ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಉತ್ತಪ್ಪ ಎಂ.ಸಿ. ಹಾಗೂ ಅಬ್ದುಲ್ ಲತೀಫ್ ನಾಮಪತ್ರ ಸಲ್ಲಿಸಿದ್ದರು. ಜ.೨೧ರಂದು ನಾಮಪತ್ರ ಹಿಂಪಡೆಯುವ ದಿನ ಉತ್ತಪ್ಪ ಎಂ.ಸಿ. ಹಾಗೂ ಅಬ್ದುಲ್ ಲತೀಫ್ ನಾಮಪತ್ರ ಹಿಂಪಡೆದಿದಯದರಿಂದ ಉಳಿದ 5 ಮಂದಿ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದರು.
ಉಳಿದಂತೆ ಹಿಂದುಳಿದ ಎ ಮೀಸಲು ಕ್ಷೇತ್ರದಿಂದ ಸಹಕಾರ ಭಾರತಿಯ ಸುರೇಶ್ ಕಣೆಮರಡ್ಕ ಹಾಗೂ ಚಂದ್ರಜಿತ್ ಮಾವಂಜಿ ಆಯ್ಕೆಯಾದರೆ, ಮಹಿಳಾ ಮೀಸಲು ಕ್ಷೇತ್ರದಲ್ಲಿ ಸಹಕಾರ ಭಾರತಿಯ ಶ್ರೀಮತಿ ಜಲಜಾ ದೇವರಗುಂಡ ಹಾಗೂ ಕಾಂಗ್ರೆಸ್ ಬೆಂಬಲಿತ ಸರಸ್ವತಿ ಕಣೆಮರಡ್ಕ ರವರು ಅವಿರೋಧವಾಗಿ ಆಯ್ಕೆಯಾದರು. ಪ.ಪಂಗಡ ಮೀಸಲು ಕ್ಷೇತ್ರದಿಂದ ಸಹಕಾರ ಭಾರತಿಯ ಮೋನಪ್ಪ ನಾಯ್ಕ ಬೇಂಗತ್ತಮಲೆ ಮತ್ತು ಪ.ಜಾತಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ರವಿ ಚೇರದಮೂಲೆ ಕನ್ಯಾನ ಆಯ್ಕೆಯಾದರೆ, ಸಾಲರಹಿತರ ಕ್ಷೇತ್ರದಿಂದ ಶ್ರೀಮತಿ ಭಾರತಿ ರಘುಪತಿ ಉಗ್ರಾಣಿಮನೆ ಅವಿರೋಧ ಆಯ್ಕೆ ಯಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.