Breaking News

ಸ್ನೇಹ ಯುವ ಬಳಗ ಮೆತ್ತಡ್ಕ ಕಟ್ಟಡ ಮತ್ತು ಸ್ನೇಹ ವೃತ್ತ ಉದ್ಘಾಟನೆ

Advt_Headding_Middle
Advt_Headding_Middle

ಸ್ನೇಹ ಮಿತ್ರ ಬಳಗ ಮೆತ್ತಡ್ಕ – ತಳೂರು ಇದರ ಎತ್ತಿನಹೊಳೆ ಎಂಬಲ್ಲಿ ನಿರ್ಮಿಸಿದ ಕಟ್ಟಡದ ಉದ್ಘಾಟನೆಯು ಜ.೧೯ರಂದು ನಡೆಯಿತು.

ಜ್ಞಾನದೀಪ ವಿದ್ಯಾಸಂಸ್ಥೆಯ ಅಧ್ಯಕ್ಷ ಚಂದ್ರ್ರಶೇಖರ ಭಟ್ ತಳೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಛೇರಿಯನ್ನು ೨೪ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ಉದ್ಘಾಟಿಸಿದರು. ಸ್ನೇಹ ವೃತ್ತವನ್ನು ನಾರಾಯಣ ಗೌಡ ಅಂಬೆಕಲ್ಲುರವರು ಗಿಡ ನೆಡುವುದತ ಮೂಲಕ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಸ್ನೇಹ ಯುವ ಬಳಗದ ಅಧ್ಯಕ್ಷ ಆನಂದ ಮಡಿವಾಳ ಹಲಸಿನಡ್ಕ, ಗೌರವಾಧ್ಯಕ್ಷ ಜಯಂತ ತಳೂರು, ಸ್ನೇಹ ಯುವ ಬಳಗ ಮೆತ್ತಡ್ಕ ಇದರ ರಜತ ಸಂಭ್ರಮ ಆಚರಣಾ ಸಮಿತಿಯ ಅಧ್ಯಕ್ಷ ಭಾಸ್ಕರ ಬಾಳೆತೋಟ, ೨೪ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೃ.ಶಾ.ಮರ್ಕಂಜ, ಎಲಿಮಲೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಪೇರಾಲು, ಚೆನ್ನಕೇಶವ ದೇವಸ್ಥಾನದ ಆಡಳಿತ ಮೋಕ್ತೇಸರ ಹರಪ್ರಸಾದ್ ತುದಿಯಡ್ಕ, ದೇವಚಳ್ಳ ಸ.ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್, ಮಾವಿನಕಟ್ಟೆ ಉದಯಗಿರಿ ಮಹಾವಿಷ್ಣು ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮಾವಿನಕಟ್ಟೆ, ದೇವಚಳ್ಳ ಗ್ರಾ.ಪಂ. ಸದಸ್ಯ ಕೃಷ್ಣಯ್ಯ ಮೂಲೆತೋಟ, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಮತ್ತಿತರರು ಉಪಸ್ಥಿತರಿದ್ದರು. ಎಲಿಮಲೆ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.