ಸುಳ್ಯ ಅನ್ಸಾರಿಯ ಯತೀಂಖಾನದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮಹಿಳಾ ಜಾಗ್ರತಿ ಶಿಬಿರ

Advt_Headding_Middle
Advt_Headding_Middle

ದೇಶದ ಸಂವಿಧಾನ ರಕ್ಷಿಸಲು ಮೂರನೇ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ : ನಸ್ರಿಯಾ ಬೆಳ್ಳಾರೆ

ಸುಳ್ಯ ಅನ್ಸಾರಿಯ ಯತೀಂಖಾನದ ಸಭಾಂಗಣದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಸಂವಿಧಾನ ವಿರೋಧಿ ಎನ್.ಆರ್.ಸಿ, ಸಿ.ಎ.ಎ.ಮತ್ತು ಎನ್.ಪಿ.ಆರ್ ಕಾಯಿದೆಯನ್ನು ವಿರೋಧಿಸಿ ಮಹಿಳೆಯರ ಜನಜಾಗೃತಿ ಕಾರ್ಯಕ್ರಮ ಜ.21ರಂದು ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವುಮೆನ್ ಇಂಡಿಯಾ ಮೂವ್ಮೆಂಟ್ ಇದರ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮಾತನಾಡಿ, ದೇಶದಲ್ಲಿ ಒಂದು ಧರ್ಮದ ಆಧಾರದಲ್ಲಿ ವಿಭಜನಕಾರಿ‌ ನೀತಿ ಜಾರಿಗೆ ಬರುತ್ತಿದೆ. ದೇಶ ಫ್ಯಾಸಿಸ್ಟರ ಕೈಗೆ ಸಿಕ್ಕಿ ನಲುಗುತ್ತಿದ್ದು, ನಮ್ಮನ್ನು ದಮನಿಸುವ ಕಾರ್ಯ ನಿರಂತರವಾಗಿ‌ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ನಾವು ಫ್ಯಾಸಿಸ್ಟರ ವಿರುದ್ಧ ಶಕ್ತವಾಗಿ ಹೋರಾಡಬೇಕಿದೆ ಎಂದರು.


ಇದಕ್ಕಾಗಿ ಮಹಿಳೆಯರ ಪಾತ್ರವು ಪ್ರಮುಖವಾಗಿದ್ದು,ಈ ಕಾಯಿದೆಯಿಂದ ಕೇವಲ ಮುಸ್ಲಿಮರಿಗೆ ಮಾತ್ರ ಸಮಸ್ಯೆ ಇರುವುದಲ್ಲ ಪ್ರತೀಯೋರ್ವ ಭಾರತೀಯನಿಗು ಇದರಲ್ಲಿ ಸಮಸ್ಯೆ ಇದೆ.ಹಾಗಾಗಿ ಮುಂದಿನ ದಿನಗಳಲ್ಲಿ ಭಾರತದ ಸಂವಿಧಾನವನ್ನು ಉಳಿಸಲು ಮೂರನೇ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗುವ ಎಲ್ಲಾ ಸಾದ್ಯತೆಯು ಇದೆ.ಅದಕ್ಕಾಗಿ ಮಹಿಳೆಯರು ಈಗಲೇ ಮಾನಸಿಕವಾಗಿ ತಯಾರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುನ್ನುರ ಇಪ್ಪತ್ತಕ್ಕು ಅಧಿಕ ಮಹಿಳೆಯರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.