ಮೇನಾಲ ಅಪಘಾತ: ರಸ್ತೆಗೆ ಅಪ್ಪಳಿಸಲ್ಪಟ್ಟು ಇಬ್ಬರು ಬೈಕ್ ಸವಾರರು ಮೃತ್ಯು

Advt_Headding_Middle
Advt_Headding_Middle


ಬೈಕ್ ಸ್ಕಿಡ್ ಆಗಿ ಸವಾರರು ರಸ್ತೆಗೆ ಅಪ್ಪಳಿಸಲ್ಪಟ್ಟು ಮೃತಪಟ್ಟ ಘಟನೆ ಸಂಭವಿಸಿದೆ. ಅಜ್ಜಾವರ ಗ್ರಾಮದ ಮೇನಾಲದಲ್ಲಿ ಈ ಅಪಘಾತ ನಡೆದಿದ್ದು, ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರು ಹಿಂದಿ ಭಾಷಿಕ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುಳ್ಯದಿಂದ ಈ ಕಾರ್ಮಿಕರು ಸಾರಣೆ ಕೆಲಸಕ್ಕೆಂದು ಉಮ್ಮರ್ ಪಳ್ಳತ್ತಡ್ಕ ಎಂಬವರ ಮನೆಗೆ ಹೊರಟಿದ್ದರು. ಮೇನಾಲದಲ್ಲಿ ಇವರ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆದಾಗ ಸವಾರರು ರಸ್ತೆಗೆ ಅಪ್ಪಳಿಸಲ್ಪಟ್ಟರು. ಬೈಕ್ ಲಾರಿಗೆ ಗುದ್ದಿ ಬಿತ್ತು. ರಸ್ತೆಗೆ ಅಪ್ಪಳಿಸಲ್ಪಟ್ಟ ಇಬ್ಬರು ಕೂಡಾ ಸ್ಥಳದಲ್ಲಿಯೇ ಮೃತಪಟ್ಟರು. ಬೈಕ್ ಆ ಬಳಿಕ ಆ ದಾರಿಯಾಗಿ ಬರುತ್ತಿದ್ದ ಶ್ರೀ ಕಟೀಲ್ ಲಾರಿಗೆ ಢಿಕ್ಕಿ ಹೊಡೆದು ಬಿತ್ತೆನ್ನಲಾಗಿದೆ.

ಮೃತರು ಉತ್ತರಪ್ರದೇಶದ ಮುಜಾಫರ್ ನಗರದ ಡ್ಯಾನಿಶ್ ಮತ್ತು ಅಜ್ಮಲ್ ಎಂದು ಗೊತ್ತಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.