Breaking News

ಕೆಎಸ್‌ಎಸ್ ಕಾಲೇಜಿನ ಪ್ರೇರಣಾ ಫೆಸ್ಟ್ ಸಮಾರೋಪ-ಚಟುವಟಿಕೆಗಳು ಹೊಸತನಕ್ಕೆ ಪೂರಕವಾಗಿರಲಿ: ಮಾಧವ ಭಟ್

Advt_Headding_Middle
Advt_Headding_Middle

                             ಚಿತ್ರ: ಎನ್.ಎಸ್.ಪೋಟೋಗ್ರಾಫಿ ಸುಳ್ಯ

ಕುಕ್ಕೆಶ್ರೀ ಮಹಾವಿದ್ಯಾಲಯದ ಪ್ರೇರಣಾ 2020 ಇಂಟರ್ ಕ್ಲಾಸ್ ಮ್ಯಾನೇಜ್‌ಮೆಂಟ್ ಫೆಸ್ಟ್ ಇದರ ಸಮಾರೋಪ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಮಾಧವ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪ್ರತಿಯೊಂದಕ್ಕೂ ವಿಷಯ ಕಲಿಕಾ ವಿಷಯವೆಂದು ಪರಿಗಣಿಸಿ ಮುನ್ನುಗ್ಗಬೇಕು, ನಮ್ಮ ಚಟುವಟಿಕೆಗಳು ಹೊಸತನಕ್ಕೆ ಪೂರಕವಾಗಿರಬೇಕು ಎಂದ ಅವರು ಕಲಿಕೆಯಲ್ಲಿ ಕೇವಲ ಪಠ್ಯದ ವಿಷಯವಷ್ಟೇ ಅಲ್ಲದೇ ಇತರ ಪಠ್ಯೇತರ ವಿಷಗಳ ಬಗ್ಗೆಯೂ ಆಸಕ್ತಿ ವಹಿಸುವುದರಿಂದ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬಹುದು ಎಂದರು.
ಉದ್ಯಮಿ ರವಿ ಕಕ್ಕೆಪದವು ಮಾತನಾಡಿ, ಕಷ್ಟವನ್ನು ಅರಿತು ಬಂದಾಗ ಜೀವನದ ಪಾಠ ದೊರೆಯುತ್ತದೆ. ನಮ್ಮ ಕೆಲಸದೊಂದಿಗೆ ಸಮಾಜ ಸೇವೆಯನ್ನು ಒಂದು ಭಾಗವಾಗಿ ಆಯ್ಕೆ ಮಾಡಿಕೊಳ್ಳೋಣ ಎಂದ ಅವರು ಪ್ರೇರಣಾ ಫೆಸ್ಟ್ 2020 ಅತ್ಯುತ್ತಮ ಕಾರ್ಯಕ್ರಮ ಎಂದರು.
ಸಂಸ್ಥೆಯ ಪ್ರಾಂಶಪಾಲರಾದ ಪ್ರೊ.ಉದಯ ಕುಮಾರ್ ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಪ್ರೊ.ಬಾಲಕೃಷ್ಣ ಪೈ, ಫೈನಲ್ ಬಿಕಾಂ ಬಿ ತರಗತಿಯ ಅಕಾಡೆಮಿಕ್ ಅಡ್ವೈಸರ್ ಪ್ರೊ.ರಮನಾಥ್, ಪ್ರೇರಣಾ ಫೆಸ್ಟ್ ೨೦೨೦ರ ಪ್ರೋಗ್ರಾಂ ಕನ್ವೀನರ್ ಪ್ರೊ.ರಶ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫೆಸ್ಟ್‌ನಲ್ಲಿ ಅನ್ವೇಷಣಾ(ಪ್ರಾಡಕ್ಟ್ ಲಾಂಚ್), ಸಮರ್ಥ(ಬೆಸ್ಟ್ ಮ್ಯಾನೇಜರ್), ಅರ್ಥವಾನ್(ಫೈನಾನ್ಸ್), ಸ್ಪರ್ಧಾ(ಮಾರ್ಕೆಟಿಂಗ್), ಪ್ರಚಾರಕ(ಜಾಹಿರಾತು), ಅಥ್ಯ(ಕ್ವಿಝ್) ಮೊದಲಾದ ಆರು ವಿಧದ ಸ್ಪರ್ಧೇಗಳನ್ನು ಏರ್ಪಾಡಿಸಲಾಗಿತ್ತು.
ಫಲಿತಾಂಶ;
ಪ್ರೇರಣಾ ಫೆಸ್ಟ್ 2020ರ ಸ್ಪರ್ಧೆಯಯಲ್ಲಿ ದ್ವಿತೀಯ ಬಿಕಾಂ ಎ ತರಗತಿ ಚಾಂಪಿಯನ್ ತನ್ನದಾಗಿಸಿಕೊಂಡಿತು. ಬಿಬಿಎ ರನ್ನರ್ಸ್ ಆಗಿ ಹೊರಮಿಮ್ಮಿತು. ಅತಿಥಿಗಳು ವಿಜೇತರನ್ನು ಗೌರವಿಸಿದರು. ವಿದ್ಯಾರ್ಥಿ ಸಂಘದ ನಾಯಕ ರಕ್ಷಿತ್ ಪರಮಲೆ ಸ್ವಾಗತಿಸಿ, ಪ್ರೇರಣಾ 2020 ಇದರ ಪ್ರೋಗ್ರಾಂ ಕೋ-ಅರ್ಡಿನೆಟರ್ ರಜನೀಶ್ ಕೆ. ಬಿ ವಂದಿಸಿದರು. ವಿದ್ಯಾರ್ಥಿಗಳಾದ ಸನತ್, ಭೂಮಿಕಾ ಫೈನಲ್ ಬಿಕಾಂ ಬಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.