ಫೆ.2 : ಗುಂಡ್ಯ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ದೈವಗಳ ಧರ್ಮನಡಾವಳಿ ನೇಮೋತ್ಸವ

Advt_Headding_Middle
Advt_Headding_Middle

ಗುಂಡ್ಯ ಮಾಡರಮನೆ ಸಪರಿವಾರ ಶ್ರೀ ಉಳ್ಳಾಕುಲು ದೈವಸ್ಥಾನದಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ದೈವಗಳ ಧರ್ಮ ನಡಾವಳಿ ನೇಮೋತ್ಸವ
ಆಲೆಟ್ಟಿ ಗ್ರಾಮದ ಗುಂಡ್ಯ ಮಾಡರಮನೆ ಸಪರಿವಾರ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ಉಳ್ಳಾಕುಲು ಸಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ದೈವಗಳ ಧರ್ಮ ನಡಾವಳಿ ನೇಮೋತ್ಸವವರು ಫೆ. 2ರಿಂದ 4 ರ ತನಕ ನಡೆಯಲಿದೆ.
ಫೆ.2ರಂದು ಪೂ. 6.೦೦ ಕ್ಕೆ ಭಜನೆ, ಫೆ.3 ರಂದು ಪೂ. 7.೦೦ ರಿಂದ ಉಗ್ರಾಣ ತುಂಬುವುದು, ಗಣಪತಿ ಹವನ, ನವಕಾಭಿಶೇಕ, ನಾಗತಂಬಿಲ, ಸಪರಿವಾರ ದೈವ ದೇವರುಗಳ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 7.೦೦ ರಿಂದ ಶ್ರೀ ಉಳ್ಳಾಕುಲು ಸಪರಿವಾರ ದೈವಗಳ ಧರ್ಮನಡಾವಳಿ ನೇಮೋತ್ಸವ, ವಾಲಸಿರಿ, ಕಿರಿಯರ ನೇಮ, ಹಿರಿಯರ ನೇಮ ನಡೆಯಲಿದೆ.
ಫೆ.4 ರಂದು ಪೂ.9.೦೦ ರಿಂದ ಸಪರಿವಾರ ದೈವದ ನೇಮೋತ್ಸವ ಶ್ರೀ ಮಲೆ ಚಾಮುಂಡಿ ದೈವ, ಶ್ರೀ ಪುರುಷ ದೈವ, ಶ್ರೀ ಮದಿಮಾಲ್, ಶ್ರೀ ಅಜ್ಜಿ, ಶ್ರೀ ಪೊಟ್ಟನ್ ದೈವ, ಶ್ರೀ ಪಂಜುರ್ಲಿ ದೈವ, ಶ್ರೀ ಕೂಜಿಗಳು ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.