ಕುಕ್ಕುಜಡ್ಕ: ಅನು ಎಂಟರ್‌ಪ್ರೈಸಸ್ ಶುಭಾರಂಭ

Advt_Headding_Middle
Advt_Headding_Middle

ಕುಕ್ಕುಜಡ್ಕದ ಪ್ರಸಾದ್ ಕಾಂಪ್ಲೆಕ್ಸ್‌ನಲ್ಲಿ ಅನಂತ ಕಲ್ಮಡ್ಕ ಮಾಲಕತ್ವದ ಅನು ಎಂಟರ್‌ಪ್ರೈಸಸ್ ಜ.23ರಂದು ಶುಭಾರಂಭಗೊಂಡಿತು.
ಮಾಲಕರ ತಂದೆ ಗೋವಿಂದ ಭಟ್ ಮತ್ತು ಭಗವಾನ್ ಶ್ರೀ ಸಾಯಿ ಸೇವಾ ಟ್ರಸ್ಟ್
ಚೊಕ್ಕಾಡಿ ಇಲ್ಲಿಯ ಕಾರ್ಯದರ್ಶಿ ಸಾಯಿಪ್ರಸಾದ್ ಎಸ್. ಸಂಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಸಾದ್ ಕಾಂಪ್ಲೆಕ್ಸ್‌ನ ಮಾಲಕರಾದ ಮುರಳಿ ಪ್ರಸಾದ್, ಗಣೇಶ್ ಉಪಸ್ಥಿತರಿದ್ದರು.

ಪ್ರಥಮ ಗ್ರಾಹಕರಾಗಿ ಜಗದೀಶ್ ಪೈಲೂರು, ತಾರನಾಥ ಪೈಲೂರು ವಸ್ತಗಳನ್ನು ಖರೀದಿಸಿದರು.
ಯಂತ್ರೋಪಕರಣಗಳಾದ ಹುಲ್ಲು ತೆಗೆಯುವ ಮಿಶನ್, ಔಷದ ಸಿಂಪಡನೆ ಮಿಶನ್, ಬ್ಯಾಟರಿ ಸ್ಪ್ರೇಯರ್, ಮ್ಯಾನುವಲ್ ಸ್ಪ್ರೇಯರ್, ಮರ ಕತ್ತರಿಸುವ ಯಂತ್ರ ಮತ್ತು ಕೃಷಿ ಹಾಗೂ ಪಂಶುಸಂಗೋಪನೆ ಆಹಾರ, ಕಾಫಿ, ರಬ್ಬರ್ ಅರಣ್ಯ ಉದ್ಯಾನವನಕ್ಕೆ ಉಪಯೋಗವಾಗುವ ಎಲ್ಲಾ ಉಪಕರಣ ಹಾಗೂ ಬಿಡಿಭಾಗಗಳು ಇಲ್ಲಿ ಲಭ್ಯವಿದೆ. ಹಾಗೂ ಯಂತ್ರೋಪಕರಣಗಳ ಮಾರಾಟ ಮತ್ತು ದುರಸ್ಥಿ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.