ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಹಿನ್ನಲೆ-ಬಿಗು ಪೊಲೀಸ್ ಬಂದೋಬಸ್ತ್ ನಲ್ಲಿ ಕಟ್ಟಡಗಳ ತೆರವು

Advt_Headding_Middle
Advt_Headding_Middle

 

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಅಂಗವಾಗಿ ರಸ್ತೆ ನಿರ್ಮಾಣವಾಗಲಿರುವ ಬದಿಯ ಕಟ್ಟಡಗಳ ತೆರವು ಕಾರ್ಯಚರಣೆ ಜ.22 ರಂದು ನಡೆಸಲಾಯಿತು.

ಸುಬ್ರಹ್ಮಣ್ಯ ನಗರ ಅಭಿವೃದ್ಧಿಯು ಬಹುಕೋಟಿಯ ಮಾಸ್ಟರ್ ಪ್ಲಾನ್ ಯೋಜನೆಯಡಿ ನಡೆಯುತ್ತಿದ್ದು, ರಸ್ತೆಗಳ ಸಂಪೂರ್ಣ ಅಭಿವೃದ್ಧಿ ನಡೆಸಲಾಗುತ್ತಿದೆ. ನಗರದಾದ್ಯಂತ ಕಾಂಕ್ರೀಟ್‌ನ ಸುಸಜ್ಜಿತ ರಸ್ತೆಗಳ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಈ ಸಂಬಂಧ ಆದಿ ಸುಬ್ರಹ್ಮಣ್ಯ ದೇಗುಳದ ಸೇತುವೆ ಬಳಿ ಸಂಪರ್ಕ ರಸ್ತೆಯ ಬದಿಯಲ್ಲಿದ್ದ ಸುಬ್ರಹ್ಮಣ್ಯ ದೇಗುಳಕ್ಕೆ ಸಂಬಂಧಪಟ್ಟ ಕಟ್ಟಡದ ತೆರವನ್ನು ಜೇಸಿಬಿ ಮೂಲಕ ಸುಬ್ರಹ್ಮಣ್ಯ ಪೊಲೀಸರ ಬಿಗಿ ಭದ್ರತೆಯೊಂದಿಗೆ ನಡೆಸಲಾಯಿತು.

ದೇವಳದ ಆಡಳಿತಾಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ. ಸ್ಥಳದಲ್ಲಿದ್ದು ಕಾರ್ಯಚರಣೆಯ ಮಾಹಿತಿಯನ್ನು ಸುಬ್ರಹ್ಮಣ್ಯ ದೇಗುಲದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್.ಅವರಿಂದ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಪೇಟೆಯ ರಸ್ತೆಯ ಬದಿಯ ಅನಧಿಕೃತ ವ್ಯಾಪಾರಸ್ಥರ ತೆರವು ಕಾರ್ಯಚರಣೆಯನ್ನು ನಡೆಸಲಾಯಿತು. ದೇಗುಲದ ಇಂಜಿನಿಯರ್ ಉದಯ ಕುಮಾರ್, ಗ್ರಾ.ಪಂ. ಉಪಾಧ್ಯಕ್ಷ ರಾಜೇಶ್ ಎನ್.ಎಸ್. ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಮುಂದಿನ ದಿನಗಳಲ್ಲಿ ಪೇಟೆಯಲ್ಲಿ ಇನ್ನೂ ಕೆಲವು ಕಟ್ಟಡಗಳ ತೆರವು ಕಾರ್ಯಚರಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.