ಬಾಳಿಲ ಮುಪ್ಪೇರ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ವಾರಿಜ, ಉಪಾಧ್ಯಕ್ಷೆಯಾಗಿ ಶ್ರೀಮತಿ ವಾರಿಜಾಕ್ಷಿ ಆಯ್ಕೆ

Advt_Headding_Middle
Advt_Headding_Middle

 

ಬಾಳಿಲ ಮುಪ್ಪೇರ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಎಂ.ವಾರಿಜ ಮೂಲೆಮಜಲು ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ವಾರಿಜಾಕ್ಷಿ ಬಾಳೆಹಿತ್ಲುರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಆಡಳಿತ ಮಂಡಳಿಗೆ ಜ.೧೯ರಂದು ಚುನಾವಣೆ ನಡೆಯಬೇಕಾಗಿತ್ತು ಆದರೆ ೧೩ ಸ್ಥಾನಕ್ಕೆ ಕೇವಲ ೧೧ ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿತ್ತು.
ಜ.೨೩ ರಂದು ಅಧ್ಯಕ್ಷ ,ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆಯಿತು.
ನಿರ್ದೇಶಕರಾಗಿ ಸಾಮಾನ್ಯ ಕ್ಷೇತ್ರದಿಂದ ಶ್ರೀಮತಿ ವಾರಿಜಾಕ್ಷಿ ಬಾಳೆಹಿತ್ಲು, ಶ್ರೀಮತಿ ತಂಗಮ್ಮ ಕಾಯಾರ,ಶ್ರೀಮತಿ ಜಾನಕಿ ಎ.ಕೆ.ಅಗಲ್ಪಾಡಿ,ಶ್ರೀಮತಿ ಮಮತಾ ದೋಳದಗುಂಡಿ,ಶ್ರೀಮತಿ ಲೀಲಾವತಿ ಬಿ.ಬದಿವನ,ಶ್ರೀಮತಿ ಕುಸುಮಾವತಿ ಇಂದ್ರಾಜೆ,ಶ್ರೀಮತಿ ಸಣ್ಣಮ್ಮ ಮುಗುಪ್ಪು, ಶ್ರೀಮತಿ ಗಾಯತ್ರಿ ಜೋಗಿಬೆಟ್ಟು,ಶ್ರೀಮತಿ ಜಯಶ್ರೀ ದೇವಸ್ಯ ಆಯ್ಜೆಯಾಗಿದ್ದರು.
ಹಿಂದುಳಿದ ಪ್ರವರ್ಗ ಎ ಯಿಂದ ಶ್ರೀಮತಿ ವಾರಿಜ ಮೂಲೆಮಜಲು,ಮತ್ತು ಶ್ರೀಮತಿ ಸರೋಜಿನಿ ದೋಳಮನೆ ಆಯ್ಕೆಯಾಗಿದ್ದರು.
ಜಯರಾಮ ಕೆ.ಯವರು ಚುನಾವಣಾಧಿಕಾರಿಯಾಗಿದ್ದರು.ಸಂಘದ ಕಾರ್ಯದರ್ಶಿ ನಿರ್ಮಲ ಡಿ.ರೈ,ಮತ್ತು ಹಾಲು ಪರೀಕ್ಷಕಿ ವಾರಿಜ ಎಸ್.ರೈ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.