ಭೀಮರಾವ್ ವಾಷ್ಠರ್ ಸಾಹಿತ್ಯ ರಚಿಸಿ ಹಾಡಿದ್ದ  ಮ್ಯೂಸಿಕ್ ಆಲ್ಬಮ್ ಬಿಡುಗಡೆ ಮತ್ತು ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮ

Advt_Headding_Middle
Advt_Headding_Middle

ಸುಳ್ಯದ ಚಂದನ ಸಾಹಿತ್ಯ ವೇದಿಕೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಸಾಂಸ್ಕೃತಿಕ ಮತ್ತು ಕಲಾ ಸಂಘ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಸಾಹಿತಿ , ಜ್ಯೋತಿಷಿ ಎಚ್ ಭೀಮರಾವ್ ವಾಷ್ಠರ್ ಸಾಹಿತ್ಯ ರಚಿಸಿ , ಹಾಡಿ , ನಿರ್ಮಾಣ ಮಾಡಿದ ಬಂದರ ಬಾರಾ ಹುಡುಗಿ ಜಾನಪದ ಗೀತೆಯ ಮ್ಯೂಸಿಕ್ ಆಲ್ಬಮ್ ಬಿಡುಗಡೆ ಕಾರ್ಯಕ್ರಮ ಮತ್ತು ಬಣ್ಣದ ಲೋಕ ಚಿತ್ರಕಲಾ ಸ್ಪರ್ಧೆಯು ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ತರಗತಿಯಲ್ಲಿ ಇತ್ತೀಚಿಗೆ ಈ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಮ್ .ವೆಂಕಪ್ಪಗೌಡ ಉದ್ಘಾಟಿಸಿದರು .

ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ ಎಚ್ .ಭೀಮರಾವ್ ವಾಷ್ಠರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಮಾಜ ಸೇವಕ ಮಂಜುನಾಥ ಬಳ್ಳಾರಿ ಉಪಸ್ಥಿತರಿದ್ದರು. ಶ್ರೀಹರಿ ಪೈಂದೋಡಿ ರವರು ಸ್ವಾಗತಿಸಿ , ಪ್ರಸನ್ನ ಐವರ್ನಾಡು ವಂದಿಸಿ ,ನಿರೂಪಿಸಿದರು .ಚಿತ್ರಕಲಾ ಸ್ಪರ್ಧೆಯಲ್ಲಿ ೪೮ ವಿದ್ಯಾರ್ಥಿಗಳು ಭಾಗವಹಿಸಿದ್ದರು . ೩ ವಿಭಾಗದಲ್ಲಿ ನಡೆದ ಸ್ಪರ್ಧೆಯ ಫಲಿತಾಂಶ ಹೀಗಿದೆ . ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಸಾನ್ವಿ ಅಟ್ಲುರು ೩ನೇ ತರಗತಿ , ರೋಟರಿ ಶಾಲೆ (ಪ್ರಥಮ ) ಶ್ರೀತನ್ ಪಿ ೨ನೇ ತರಗತಿ ರೋಟರಿ ಶಾಲೆ (ದ್ವಿತೀಯ ) ಚೈತನ್ಯ ಬಿ ಎಸ್ ೪ನೇ ತರಗತಿ (ತೃತೀಯ ). ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಾತ್ವಿಕ್ ಕುಮಾರ್ ೫ ನೇ ತರಗತಿ ವಿವೇಕಾನಂದ ಶಾಲೆ ವಿನೋಬನಗರ (ಪ್ರಥಮ ) ಜೆ .ಸಿಂಧುಶ್ರೀ ೬ನೇ ತರಗತಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ (ದ್ವಿತೀಯ) ಊರ್ಮಿಳಾ ಕೆ ೬ನೇ ತರಗತಿ ಸ.ಮಾ.ಹಿ.ಪ್ರಾ.ಶಾಲೆ (ತೃತೀಯ ) ಪ್ರೌಢ ಶಾಲಾ ವಿಭಾಗ ಸಮೀಕ್ಷಾ ಜಿ ೯ನೇ ತರಗತಿ ರೋಟರಿ ಶಾಲೆ (ಪ್ರಥಮ) , ಧೀರಜ್ ಬಿ ಎಸ್. ಸಂತ ಜೋಸೆಫ್ ಸ್ಕೂಲ್ ಸುಳ್ಯ (ದ್ವಿತೀಯ) , ಅಖಿಲೇಶ್ ಕೆ ೮ನೇ ತರಗತಿ ಸಂತ ಜೋಸೆಫ್ ಸ್ಕೂಲ್ ಸುಳ್ಯ (ತೃತೀಯ).
ಪೆ. ೨ ರಂದು ಸುಳ್ಯದ ಎ ಪಿ ಎಮ್ ಸಿ ಸಭಾಂಗಣದಲ್ಲಿ ನಡೆಯುವ ಸಾಹಿತ್ಯ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.