ಫೆ. 8ರಿಂದ ಎಣ್ಮೂರು ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್‌ನಲ್ಲಿ ಉರೂಸ್ ಸಮಾರಂಭ ಮೂರು ದಿನ ಧಾರ್ಮಿಕ ಮತ ಪ್ರವಚನ

Advt_Headding_Middle
Advt_Headding_Middle

ಇತಿಹಾಸ ಪ್ರಸಿದ್ಧ ಎಣ್ಮೂರು ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಉರೂಸ್ ಸಮಾರಂಭ ಹಾಗೂ ಮೂರು ದಿವಸಗಳ ಧಾರ್ಮಿಕ ಮತ ಪ್ರವಚನ ಫೆ. 8,9,10 ರಂದು ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಮಸೀದಿಯ ಗೌರವಾಧ್ಯಕ್ಷ ಕುಂಞಿಪಳ್ಳಿ ಐವತ್ತೊಕ್ಲು ಹಾಗೂ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ ಹೇಳಿದರು.

ಜ. ೨೪ರಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ೩ ದಿನದ ಕಾರ್ಯಕ್ರಮಗಳ ವಿವರ ನೀಡಿದರು. ಫೆ. ೮ರಂದು ಮಸೀದಿಯ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಪಠೇಲ್ ಧ್ವಜಾರೋಹಣ ನಡೆಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಅಂದು ರಾತ್ರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುವಾಶೀರ್ವಚನ ನೀಡುವರು. ಎಣ್ಮೂರು ಮಸೀದಿ ಖತೀಬ ಅಬ್ದುಲ್ ರಹಿಮಾನ್ ಸಖಾಫಿ ಅಲ್ ಅಝ್ ಹರಿ ಉದ್ಘಾಟನೆ ನೆರವೇರಿಸುವರು. ಮುಖ್ಯ ಭಾಷಣಗಾರರಾಗಿ ರಾಫಿ ಅಸಾನಿ ಕಾಂತಪುರಂ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸುವರು.


ಫೆ. ೯ರಂದು ಝೈನುಲ್ ಅಬಿದೀನ್ ತಂಙಳ್ ದುಗಲಡ್ಕ ದುವಾರ್ಶೀಚನ ನೀಡುವರು. ಮುಖ್ಯ ಬಾಷಣಗಾರರಾಗಿ ಸಿರಾಜುದ್ದಿನ್ ಅಲ್ ಖಾಸಿಮಿ ಪತ್ತನಾಪುರಮ್ ಭಾಗವಹಿಸುವರು. ಫೆ. ೧೦ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಝೈನುಲ್ ಅಬಿದೀನ್ ತಂಞಳ್ ದುಗಲಡ್ಕ ದುವಾರ್ಶೀವಚನ ನೀಡುವರು. ಮುಖ್ಯ ಭಾಷಣಗಾರರಾರಿಗಿ ಅಂಝ ಮಿಸ್ಬಾಹಿ ಓಟೆಪದವು ಭಾಗವಹಿಸುವರು. ಸಮಾರಂಭದಲ್ಲಿ ದಫ್ ಪ್ರದರ್ಶನ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಖಾದರ್ ಕೊಳ್ತಂಗೆರೆ ಅಬ್ದುಲ್ ರಹಿಮಾನ್ ಪಡ್ಪಿನಂಗಡಿ, ಅಬ್ದುಲ್ ಮರಕ್ಕಡ, ರಫೀಕ್ ಪಡ್ಪಿನಂಗಡಿ, ದಾವೂದ್ ಮುಚ್ಚಿಲ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.