HomePage_Banner
HomePage_Banner

ಡಾ. ಅಕ್ಷತಾ ಸಿ.ಜೆ.ಯವರಿಗೆ ಆಯುರ್ವೇದ ಎಂ.ಡಿ.ಯಲ್ಲಿ 4 ನೇ ರ್‍ಯಾಂಕ್

 

ಮೂಡಬಿದಿರೆಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ 2019ರ ಅಕ್ಟೋಬರ್‌ನಲ್ಲಿ ನಡೆಸಿದ ಆಯುರ್ವೇದ ಎಂ.ಡಿ. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಮನೋವಿಜ್ಞಾನ ವಿಷಯದಲ್ಲಿ ಡಾ. ಅಕ್ಷತಾ ಸಿ.ಜೆ. ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ 4 ನೇ ರ್‍ಯಾಂಕ್ ಪಡೆದು  ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಗುತ್ತಿಗಾರು ಗ್ರಾಮದ ಚತ್ರಪ್ಪಾಡಿಯವರಾಗಿದ್ದು, ಪುತ್ತೂರಿನಲ್ಲಿ ವಾಸವಾಗಿರುವ ಬಿ.ಎಸ್.ಎನ್.ಎಲ್ ನಿವೃತ್ತ ಡಿ.ಜಿ.ಎಂ. ದಿ. ಜನಾರ್ದನ ನಾಯ್ಕ್ ಮತ್ತು ಪುತ್ತೂರು ಎ.ಸಿ. ಕಛೇರಿಯಲ್ಲಿ ಉದ್ಯೋಗಿಯಾಗಿರುವ ಶ್ರೀಮತಿ ಭವಾನಿ ಜನಾರ್ದನ ನಾಯ್ಕ್ ದಂಪತಿಗಳ ಪುತ್ರಿ. ಇವರು ತಮ್ಮಪ್ರಾಥಮಿಕ ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯಲ್ಲಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮತ್ತು ಪಿ.ಯು. ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಬಳಿಕ ಉಡುಪಿಯ ಎಸ್.ಡಿ.ಎಂ. ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಬಿ.ಎ.ಎಂ.ಎಸ್ ಪದವಿಯನ್ನು ಪೂರೈಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.