ಅಯ್ಯನಕಟ್ಟೆ ಉಳ್ಳಾಕುಲು ದೇವಸ್ಥಾನವನ್ನು ಶಾಸ್ತ್ರೋಕ್ತವಾಗಿ ಬಿಟ್ಟು ಕೊಡುವ ಕಾರ್ಯಕ್ರಮ

Advt_Headding_Middle
Advt_Headding_Middle

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ದೇವಸ್ಥಾನದ ಕೆಲಸ ಪೂರ್ತಿಗೊಂಡಿದ್ದು, ಜ. 25 ರಿಂದ ಜಾತ್ರೋತ್ಸವ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಕೆಲಸವನ್ನು ನೆರವೇರಿಸಿದ ಶಿಲ್ಪಿಗಳು ದೇವಸ್ಥಾನವನ್ನು ಬಿಟ್ಟು ಕೊಡುವ ಕಾರ್ಯಕ್ರಮ ಜ. 24 ರಂದು ಸಂಜೆ ನಡೆಯಿತು. ಮರದ ಕೆಲಸದ ಮುಂದಾಳತ್ವವನ್ನು ವಹಿಸಿಕೊಂಡಿದ್ದ ವಾಸುದೇವ ಆಚಾರ್ಯ ಕಿಲಂಗೋಡಿಯವರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆದ್ಲ ನರಸಿಂಹ ಭಟ್ಟರಿಗೆ ದೈವಸ್ಥಾನದ ಬೀಗದ ಕೀಯನ್ನು ಮೂರುಕಲ್ಲಡ್ಕದಲ್ಲಿ ಹಸ್ತಾಂತರಿಸಿದರು. ಎಲ್ಲಾ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು, ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನರಸಿಂಹ ಭಟ್ ದೇವತಾ ಪ್ರಾರ್ಥನೆ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.