ಅಯ್ಯನಕಟ್ಟೆ ಉಳ್ಳಾಕುಲು ಸಪರಿವಾರ ದೇವಸ್ಥಾನ ಬ್ರಹ್ಮ ಕಲಶ, ತಂತ್ರಿಗಳ ಆಗಮನ

Advt_Headding_Middle
Advt_Headding_Middle

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಬ್ರಹ್ಮ ಕಲಶೋತ್ಸವವು ಜ. 25 ರಿಂದ 30 ರ ತನಕ ಜರಗಲಿದ್ದು, ಜ. 25 ರಂದು ನೀಲೇಶ್ವರ ಪದ್ಮನಾಭ ತಂತ್ರಿಗಳ ಆಗಮನವಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆದ್ಲ ನರಸಿಂಹ ಭಟ್,
ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎನ್. ವಿಶ್ವನಾಥ ರೈ, ಅಧ್ಯಕ್ಷ ಮಾಧವ ಗೌಡ ಕುಯಿಂತೋಡು, ಶ್ರೀ ಉಳ್ಳಾಕುಲು ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಬೇರಿಕೆ, ಆಡಳಿತ ಸಮಿತಿ ವಿಶ್ವಸ್ಥರಾದ ತಂಟೆಪ್ಪಾಡಿ ಲಿಂಗಪ್ಪ ಗೌಡ, ಜಗನ್ನಾಥ ರೈ ಕಳಂಜಗುತ್ತು, ಮೂರು ಸಮಿತಿಗಳ ಪ್ರಧಾನ ಕಾರ್ಯದರ್ಶಿ ಪಿ.ಜಿ.ಎಸ್.ಎನ್. ಪ್ರಸಾದ್, ಆಡಳಿತ ಸಮಿತಿ ಕೋಶಾಧಿಕಾರಿ ಗಣೇಶ್ ಮುದ್ದಾಜೆ, ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯದರ್ಶಿ ಚಿದಾನಂದ ಗೌಡ ಬಾಳಿಲ, ಉಪಾಧ್ಯಕ್ಷ ರುಕ್ಮಯ್ಯ ಗೌಡ ಕಳಂಜ, ಸಂಚಾಲಕ ರಾಮಚಂದ್ರ ರಾವ್ ಸೇರಿದಂತೆ ಸಮಿತಿಗಳ ಸಂಚಾಲಕರು, ಸದಸ್ಯರು, ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.