ಜೆ.ಇ.ಇ. ಪರೀಕ್ಷೆಯಲ್ಲಿ ಕೆ.ವಿ.ಜಿ.ಅಮರಜ್ಯೋತಿ ವಿದ್ಯಾರ್ಥಿಗಳ ಸಾಧನೆ

Advt_Headding_Middle
Advt_Headding_Middle

ಪಿ.ಯು.ಸಿ.ನಂತರದ ವೃತ್ತಿಪರ ಶಿಕ್ಷಣಕ್ಕೆ ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆ.ಇ.ಇ ಪರೀಕ್ಷೆಯಲ್ಲಿ ಸುಳ್ಯದ ಕೆ.ವಿ.ಜಿ.ಅಮರಜ್ಯೋತಿ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿ ಮುಂದಿನ ಹಂತಕ್ಕೆ ಅರ್ಹತೆ ಗಳಿಸಿದ್ದಾರೆ.

ಜೆ.ಇ.ಇ. ಮೈನ್ಸ್ ಪೇಪರ್ 2 ರಲ್ಲಿ ಮೇಘಾ.ಎಂ. 97.0325  ಪರ್ಸೆಂಟೈಲ್ ಅಂಕ ಗಳಿಸಿ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿ NITK ಗಳ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ. ಹರಿಪ್ರಿಯಾ.ಎಸ್ ಹಾಗೂ ಅನನ್ಯಾ ಹೆಬ್ಬಾರ್ ಮುಂದಿನ ಹಂತಕ್ಕೆ ಅರ್ಹತೆ ಗಳಿಸಿದ್ದಾರೆ. ಜೆ.ಇ.ಇ. ಮೈನ್ಸ್ ಪೇಪರ್ ೧ರಲ್ಲಿ ರಿತೇಶ್.ಆರ್ NITK ಗಳ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ. ಅವರೊಡನೆ ಇತರ ೮ ವಿದ್ಯಾರ್ಥಿಗಳಾದ ಹವಿನ್.ಪಿ.ಡಿ, ನಿಧಿ.ಜೆ, ಶಶಾಂಕ್ ಬೇಲೆಗದ್ದೆ, ಹರಿಪ್ರಿಯಾ.ಎಸ್, ಕೆ.ಎಸ್.ಅಭಿಷೇಕ್, ಅರ್ಫಾನ್ ಸೈಯದ್ ಇಸ್ಮಾಯಿಲ್, ಮೊಹಮ್ಮದ್ ರಾಬಿಲ್, ಮೇಘಾ.ಎಂ ಮುಂದಿನ ಹಂತಕ್ಕೆ ಅರ್ಹತೆ ಗಳಿಸಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.