ಫೆ.4ರಂದು ಸವಿತಾ ಸಮಾಜ ಶ್ರೀ ಸತ್ಯ ನಾರಾಯಣ ಪೂಜೆಯ ದಶಮಾನೋತ್ಸವ

Advt_Headding_Middle
Advt_Headding_Middle

 

ಹರೀಶ್ ಬಂಟ್ವಾಳರಿಗೆ ಸವಿತಾಶ್ರೀ, ಮೋಹನ್ ಭಂಡಾರಿ ಕೇರ್ಪಳರಿಗೆ ಸಾಧನಾಶ್ರೀ ಪ್ರಶಸ್ತಿ ಪ್ರದಾನ

ತಾಲೂಕು ಸವಿತಾ ಸಮಾಜದ ವತಿಯಿಂದ ನಡೆಸಲಾಗುವ ಶ್ರೀ ಸತ್ಯನಾರಾಯಣ ಪೂಜೆಯ ದಶಮಾನೋತ್ಸವ ಹಾಗೂ ಸವಿತಾಶ್ರೀ ಮತ್ತು ಸಾಧನಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವು ಫೆ.4ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಳದ ಮುಂಭಾಗದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಗುರುರಾಜ್ ಅಜ್ಜಾವರ ಹೇಳಿದರು.

ಜ.25ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮ ದ ವಿವರ ನೀಡಿದರು.

ನಾಡ ಹಬ್ಬಗಳ ಆಚರಣೆ ಸಮಿತಿ ತಾಲೂಕು ಆಡಳಿತ, ಸುಳ್ಯ ತಾಲೂಕು ಸವಿತಾ ಸಮಾಜ, ಸವಿತಾ ಸಮಾಜ ಮಹಿಳಾ ಘಟಕ ಮತ್ತು ಸವಿತಾ ಯುವ ಘಟಕ ಮತ್ತು ಬಾರ್ಬರ್ಸ್ ಅಸೋಸಿಯೇಷನ್ ಸುಳ್ಯ ತಾಲೂಕು ಇವರುಗಳ ಸಂಯುಕ್ತ ಆಶ್ರಯದಲ್ಲಿ ಸವಿತಾ ಮಹರ್ಷಿ ಜಯಂತಿ ಹಾಗೂ ಸತ್ಯನಾರಾಯಣ ಪೂಜೆಯ ದಶಮಾನೋತ್ಸವ ಮತ್ತು ಪ್ರಶಸ್ತಿ ಪ್ರದಾನವು ನಡೆಯಲಿದೆ ಎಂದು ಅವರು ವಿವರಣೆ ನೀಡಿದರು.

 

ಅಂದು ಸಂಜೆ ಕಾರ್ಯಕ್ರಮ ನಡೆಯಲಿದ್ದು, ಸವಿತಾ ಧರ್ಮಪೀಠದ ಸ್ವಾಮೀಜಿಗಳಾದ ಶ್ರೀಧರಾನಂದ ಸರಸ್ವತಿ ಯವರ ದಿವ್ಯ ಸಾನಿಧ್ಯದಲ್ಲಿ, ಶಾಸಕ ಎಸ್.ಅಂಗಾರರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುವುದು. ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ ಪ್ರಶಸ್ತಿ ಪ್ರದಾನ ಮಾಡುವರು. ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಸೇರಿದಂತೆ ಹಲವು ಗಣ್ಯ ರು ಭಾಗವಹಿಸಲಿದ್ದಾರೆ.

ಪ್ರಶಸ್ತಿ ಪ್ರದಾನ : ಸಮಾರಂಭದಲ್ಲಿ ಹಿರಿಯ ಮುಖಂಡ ಹಾಗೂ ಹಿರಿಯ ಪತ್ರಕರ್ತರಾದ ಹರೀಶ್ ಬಂಟ್ವಾಳ ರಿಗೆ ಸವಿತಾ ಶ್ರೀ ಪ್ರಶಸ್ತಿ ಹಾಗೂ ಸವಿತಾ ಸಮಾಜದ ಸ್ಥಾಪಕಾಧ್ಯಕ್ಷ ಮೋಹನ್ ಭಂಡಾರಿಯವರಿಗೆ ಸಾಧನ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಾಗೂ ಮಾಜಿ ಅಧ್ಯಕ್ಷ ರುಗಳಾದ ಗಂಗಾಧರ ಎಂ.ಎಂ., ಯಸ್.ಪದ್ಮನಾಭ, ಕೆಂಚಪ್ಪ ಭಂಡಾರಿ, ದಿನೇಶ್ ಗುತ್ತಿಗಾರು, ವಸಂತ ಮೂರಾಜೆಯವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಸಮಿತಿ ಅಧ್ಯಕ್ಷೆ ಇಂದಿರಾ ಪದ್ಮನಾಭ, ಕಾರ್ಯದರ್ಶಿ ಭಾರತಿ ಬಂಟ್ವಾಳ್, ಯುವ ಘಟಕದ ಖಜಾಂಚಿ ನವೀನ್ ಸೂಂತೋಡು, ಬಾರ್ಬರ್ಸ್ ಅಸೋಸಿಯೇಷನ್ ಖಜಾಂಚಿ ಧನು ಮೂರ್ನಾಡು, ಗೀತಾಂಜಲಿ, ಸಮಿತಿ ಗೌರವ ಸಲಹೆಗಾರ ಹರೀಶ್ ಬಂಟ್ವಾಳ್ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.