ಜಯನಗರ: ಪ್ರಯಾಣಿಕರ ತಂಗುದಾಣಕ್ಕೆ ಗುದ್ದಲಿ ಪೂಜೆ

Advt_Headding_Middle
Advt_Headding_Middle


ಜಯನಗರ ಸರಕಾರಿ ಶಾಲೆ ಬಳಿ ಸ್ಥಳೀಯವಾಗಿ ಮತ್ತು ಇತರ ಭಾಗಗಳಿಂದ ಬರುವ ಪ್ರಯಾಣಿಕರು ಆಟೋ ರಿಕ್ಷಾ ಕಾದು ಕುಳಿತು ಬಿಸಿಲಿನಲ್ಲಿ ಇರುವುದರಿಂದ ಇದಕ್ಕೆ ಪರಿಹಾರ ವಾಗಿ ಸ್ಥಳೀಯ ನ.ಪಂ ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿ ರವರ ನೇತೃತ್ವದಲ್ಲಿ ಸುಳ್ಯ ಸಿಟಿ ರೋಟರಿ ಕ್ಲಬ್ ರವರ ಸಹ ಭಾಗಿತ್ವದಲ್ಲಿ ಹಾಗೂ ದೃಷ್ಠಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 9೦ಸಾವಿರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಪ್ರಯಾಣಿಕರ ತಂಗುದಾಣಕ್ಕೆ ಗುದ್ದಲಿ ಪೂಜೆ ಜ.25ರಂದು ನಡೆಯಿತು.


ಸುಳ್ಯ ಸಿಟಿ ರೋಟರಿ ಕ್ಲಬ್ ಅದ್ಯಕ್ಷ ರೋಟರಿ ಯನ್. ಭಾನುಪ್ರಕಾಶ್ ಕಾಮಗಾರಿಗೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸುಳ್ಯ ಸಿಟಿ ರೋಟರಿ ಕ್ಲಬ್ ಪ್ರ.ಕಾರ್ಯದರ್ಶಿ ರೋಟರಿಯನ್ ಗುರು ವಿಕ್ರಂ, ಸಮಿತಿ ಸದಸ್ಯರಾದ ರೋ. ಅಶೋಕ್ ಕೊಯಿಂಗೋಡಿ, ರೋ.ಪ್ರಮೋದ್, ರೋ.ರಾಗೇಶ್, ರೋ.ಥೊಮಸ್, ನ.ಪಂ.ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯೆ ಮಹಾಲಕ್ಷ್ಮಿ ಕೊರಂಬಡ್ಕ, ಮೈತ್ರಿ ಮಹಿಳಾ ಮಂಡಳಿ ಅದ್ಯಕ್ಷೆ ಅಂಬಾಬಾಯಿ, ಸ್ಥಳೀಯರಾದ ಮೋಹಿನಿ ಉಮೇಶ್, ಆದಿ ಮೊಗೇರ್ಕಳ ದೇವಸ್ಥಾನದ ಅದ್ಯಕ್ಷ ವಸಂತ ಕುದ್ಪಾಜೆ, ರೋಟರ್‍ಯಾಕ್ಟ್ ವಲಯದ ಅದ್ಯಕ್ಷ ಸುರೇಶ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯರಾದ ಮಹಮ್ಮದ್ ಮುಟ್ಟೆತ್ತೋಡಿ, ಸಚಿನ್ ಕೊಯಿಂಗೋಡಿ, ಹಸ್ಸನ್ ಎಚ್. ಎಲ್. ಎಸ್. ಸಹಕರಿಸಿದರು. ಹಸೈನಾರ್ ಜಯನಗರ ಸ್ವಾಗತಿಸಿ, ಮುಖ್ಯೋಪಾಧ್ಯಾಯ ತೀರ್ಥರಾಮ ಅಡ್ಕಬಳೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.