ಫೆ. 6 ರಿಂದ 10 : ಕೋಲ್ಚಾರು ನವೀಕರಣಗೊಂಡ ಶ್ರೀ ಶಾರದಾಂಬಾ ಭಜನಾ ಮಂದಿರದ ಪ್ರವೇಶೋತ್ಸವ ಮತ್ತು ಏಕಹಾ ಭಜನೆ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದ ಪ್ರವೇಶೋತ್ಸವ, ಶಾರದಾ ದೇವಿಯ ಪುನರ್ ಪ್ರತಿಷ್ಠಾ ಮಹೋತ್ಸವ, ನೂತನ ರಂಗಮಂದಿರ ಮತ್ತು ಪಾಕಶಾಲಾ ಉದ್ಘಾಟನಾ ಕಾರ್ಯಕ್ರಮ ಹಾಗೂ ೪೦ನೇ ವಾರ್ಷಿಕ ಏಕಹಾ ಭಜನೆಯು ಪೆರಾಜೆ ಶ್ರೀ ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ ಫೆ. ೬ ರಿಂದ ೧೦ ರ ತನಕ ನಡೆಯಲಿದೆ.

ಫೆ. ೬ ರಂದು ಬೆಳಿಗ್ಗೆ ೯.೦೦ ರಿಂದ ಉಗ್ರಾಣ ತುಂಬುವುದು, ಸಂಜೆ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ವಾಸ್ತು ಹೋಮ, ರಕ್ಷೆಘ್ನ ಹೋಮ, ವಾಸ್ತು ಬಲಿ ಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.

ಫೆ. ೭ ರಂದು ಪ್ರಾತಃ ಕಾಲ ಶ್ರೀ ಗಣಪತಿ ಹವನ, ಪೂರ್ವಾಹ್ನ ೯.೪೪ಕ್ಕೆ ಶ್ರೀ ಶಾರದಾ ದೇವಿಯ ಬೆಳ್ಳಿ ಉಬ್ಬು ಶಿಲ್ಪದ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ಸ್ಥಳೀಯರಿಂದ ಭಜನಾ ಕಾರ್ಯಕ್ರಮ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನದಿಂದ ಪುಂಡರೀಕ ನಾಯಕ್ ಕುಂಭಕೋಡು ಹಾಗೂ ಬಳಗದವರಿಂದ ಭಜನಾ ಸೇವೆ. ರಾತ್ರಿ ೮.೪೫ ರಿಂದ ಮಾಯ ತಿಲೋತ್ತಮೆ, ರುಕ್ಮಿಣಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ ಕಾಲಮಿತಿ ಯಕ್ಷಗಾನ ನಡೆಯಲಿದೆ.

ಫೆ. ೮ ರಂದು ಪೂರ್ವಾಹ್ನ ೮.೦೦ ಕ್ಕೆ ಚಂಡಿಕಾ ಯಾಗ ಹಾಗೂ ಆಹ್ವಾನಿತ ತಂಡಗಳಿಂದ ಭಜನಾ ಸಂಭ್ರಮ, ಅಪರಾಹ್ನ ೧೨.೦೦ ಕ್ಕೆ ಯಾಗಪೂರ್ಣಾಹುತಿ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ೪.೦೦ ರಿಂದ ಅಭಿನಂದನಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೯.೦೦ ರಿಂದ ರಂಗಮಯೂರಿ ಕಲಾಶಾಲೆಯವರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.
ಫೆ. ೯ ರಂದು ಪೂ.೬.೫೬ ರಿಂದ ಏಕಹಾ ಭಜನೆ, ಅಪರಾಹ್ನ ಮಹಾಪೂಜೆ ನಡೆಯಲಿದೆ. ಫೆ.೧೦ ರಂದು ಏಕಹಾ ಭಜನೆ ಸಂಪನ್ನಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.